Ticker

6/recent/ticker-posts

Header Ads Widget

Responsive Advertisement

ರಿಲಯನ್ಸ್ ಈಗ ವಿಶ್ವದ ನಂಬರ್ 2 ಇಂಧನ ಕಂಪೆನಿ!

 


 


ಮುಂಬೈ: ಭಾರತೀಯರ ಸ್ಥಾನಮಾನ ವಿಶ್ವದರ್ಜೆಗೆ ಏರುತ್ತಲೇ ಇದೆ.ಇದೀಗ  ಇನ್ನೊಂದು ಕಿರೀಟ.ವಿಶ್ವದ 5ನೇ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ಜಗತ್ತಿನ  ಎರಡನೇ ಅತಿ ದೊಡ್ಡ ಇಂಧನ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಮಾರುಕಟ್ಟೆ ಮೌಲ್ಯದಲ್ಲಿ ಅಮೆರಿಕದ ಎಕ್ಸೋನ್‌ಮೊಬಿಲ್‌ ಕಾರ್ಪೊರೇಷನ್‌ ಕಂಪನಿಯನ್ನು ಹಿಂದಿಕ್ಕಿ ರಿಲಯನ್ಸ್‌ ಈ ಸಾಧನೆ ನಿರ್ಮಿಸಿದೆ. ಈಗ ಸೌದಿ ಅರೇಬಿಯಾದ ಅರಾಮ್ಕೋ ಬಳಿಕ ವಿಶ್ವದ ಎರಡನೇ ಅತಿ ದೊಡ್ಡ ಕಂಪನಿಯಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಹೊರ ಹೊಮ್ಮಿದೆ.ಅತಿದೊಡ್ಡ ತೈಲ ಸಂಸ್ಕರಣಾ ಸಂಕೀರ್ಣವನ್ನು ನಿರ್ವಹಿಸುತ್ತಿರುವ ರಿಲಯನ್ಸ್‌ ಮಾರುಕಟ್ಟೆ ಮೌಲ್ಯ ಶುಕ್ರವಾರ ಶೇ.4.3ರಷ್ಟುಏರಿಕೆ ಆಗಿತ್ತು. ಇದರಿಂದ ಸಂಸ್ಥೆಗೆ 8 ಶತಕೋಟಿ ಡಾಲರ್‌ ಸೇರ್ಪಡೆಯಾಗಿ ರಿಲಯನ್ಸ್‌ನ ಮಾರುಕಟ್ಟೆಮೌಲ್ಯ 189 ಶತಕೋಟಿ ಡಾಲರ್‌ಗೆ ಏರಿಕೆ ಆಗುವುದರೊಂದಿಗೆ ನಂ.2 ಪಟ್ಟವನ್ನು ಅಲಂಕರಿಸಿದೆ.ಭಾರತೀಯರಿಗೆ ಇದೊಂದು ಹೆಮ್ಮೆಯ ವಿಚಾರ ನಮ್ಮ ನೆಲದ ಕಂಪನಿ ವಿಶ್ವದ ನಂಬರ್ 2.

 



Post a Comment

0 Comments