Ticker

6/recent/ticker-posts

Header Ads Widget

Responsive Advertisement

ಹಿಂದು ಜಾಗರಣ ವೇದಿಕೆ ಪುತ್ತೂರು ನಗರ ವತಿಯಿಂದ ದೀಪಹಚ್ಚುವ ಕಾರ್ಯಕ್ರಮ

 


 


ಹಿಂದೂ ಜಾಗರಣ ವೇದಿಕೆ ಪುತ್ತೂರು ನಗರ  ವತಿಯಿಂದ ಅಯೋಧ್ಯಾದಿಪತಿ ಪ್ರಭು ಶ್ರೀ ರಾಮ ಚಂದ್ರನ ಭವ್ಯವಾದ ಮಂದಿರದ ಶಿಲಾನ್ಯಾಸದ ಭೂಮಿ ಪೂಜೆಯ ಪ್ರಯುಕ್ತ ಇಂದು ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣದ ಸುತ್ತ, ಮುಂಭಾಗ ದೀಪ ಹಚ್ಚುವ ಕಾರ್ಯಕ್ರಮ ನಡೆಯಿತು.ಇದರೊಂದಿಗೆ ರಾಮಮಂದಿರ ಆದಷ್ಟು ಬೇಗ ನಿರ್ಮಾಣ ಆಗಲು ಪ್ರಾರ್ಥನೆ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರಾಮ ಮಂದಿರ  ಹೋರಾಟದಲ್ಲಿ ಭಾಗಿ ಆಗಿದ್ದ  ರಾಮ ಮಂದಿರದ ಕರಸೇವಕರಾದ ಮಾಜಿ ನಗರಸಭಾ ಅಧ್ಯಕ್ಷ ರಾಜೇಶ್ ಬನ್ನೂರು,ಕೇಶವ ಸುವರ್ಣ,ಸೀತಾರಾಮ ಆಚಾರ್ಯ,ಶೇಖರ ನಾರಾವಿ ತೆರಳಿದ್ದರು. ಈ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸೀತಾರಾಮ್ ರೈ,ಪದ್ಮಶ್ರೀ ಸೋಲಾರ್,ಮಾಜಿ ನಗರಸಭಾ ಉಪಾಧ್ಯಕ್ಷ ವಿಶ್ವನಾಥ್ ಗೌಡ,ಕೃಷ್ಣಪ್ರಸಾದ್ ಶೆಟ್ಟಿ,ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ,ಹೊಸಮನೆ,ಸಂಘಟನಾ ಕಾರ್ಯದರ್ಶಿ ಚಿನ್ಮಯ್ ರೈ ಈಶ್ವರಮಂಗಲ,ಪುತ್ತೂರು ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರ,ನಗರ ಅಧ್ಯಕ್ಷ ಪುಷ್ಪರಾಜ್ ದರ್ಬೆ,ಹಿಂದು ಜಾಗರಣ ವೇದಿಕೆಯ ಮುಖಂಡ ಪವಿತ್ರ ರೈ ಬಾಳಿಲ,ಸಂತೋಷ್ ಕುಮಾರ್ ರೈ ಕೈಕಾರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 



Post a Comment

0 Comments