ಮೊನ್ನೆ ಬೆಂಗಳೂರಿನಲ್ಲಿ ಮತಾಂಧ - ದೇಶದ್ರೋಹೀ ಪಾತಕಿಗಳಿಂದ ನಡೆದ ದಾಂಧಲೆ, ಆರಕ್ಷಕಠಾಣೆ ಮೇಲೆ ಧಾಳಿ, ಶಾಸಕರ ಮನೆಗೆ ಬೆಂಕಿ, ದರೋಡೆ, ಇತರ ಮನೆಗಳಿಗೆ ಧಾಳಿ ,ವಾಹನ ಜಖಂ, ಆಸ್ತಿಪಾಸ್ತಿ ಲೂಟಿಮಾಡಿದ ದೇಶದ್ರೋಹಿ ಕೃತ್ಯವನ್ನು ಅತ್ಯಂತ ಉಗ್ರವಾಗಿ ಖಂಡಿಸುತ್ತೇನೆ.
ಅಮಾನುಷ ದೌರ್ಜನ್ಯ ನಡೆಸಿದ ಪಾತಕಿಗಳನ್ನು ಹುಡುಕಿ ಹುಡುಕಿ ಬಂಧಿಸಿ, ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ - ಗೂಂಡಾಗಿರಿಯನ್ನು ಮಟ್ಟಹಾಕಿ. ಸೂಕ್ತ ತನಿಖೆ ನಡೆಸಿ ಆ ಗಲಭೆಯ ಹಿಂದಿರುವ ಸಂಘಟನೆಗಳನ್ನು, ರಾಜಕೀಯ ಪಿತೂರಿಗಾರರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ.
ಸ್ವಂತಂತ್ರ ಭಾರತದಲ್ಲಿ ಅಲ್ಪಸಂಖ್ಯಾತರೆಂಬ ಹಣೆಪಟ್ಟಿ ಕಟ್ಟಿಕೊಂಡವರ ನಡೆ ಇತಿಹಾಸವನ್ನು ನೆನಪು ಮಾಡುತ್ತಿದೆ.
1914 ರಲ್ಲಿ ಗಾಂಧಿ -ನೆಹರು -ಕಾಂಗ್ರೆಸಿನ ಬೆಂಬಲದೊಂದಿಗೆ ಭಾರತದಲ್ಲಿ ಖಿಲಾಫತ್ ಚಳವಳಿ ನಡೆಯಿತು.
ಬ್ರಿಟಿಷರು ಬಾಗ್ದಾದ್ ನ ಖಲೀಫ್ ನನ್ನು ಅಧಿಕಾರದಿಂದ ಕೆಳಗಿಳಿಸಿದ್ದಕ್ಕಾಗಿ, ರಾಷ್ಟ್ರೀಯವಾದಿ ಮುಸ್ಲಿಮರ ವಿರೋಧದ ಮಧ್ಯೆಯೂ, ಕಾಂಗ್ರೆಸ್ ಬೆಂಬಲದೊಂದಿಗೆ , ಮುಸ್ಲಿಂಲೀಗ್ ನ ನೇತೃತ್ವದಲ್ಲಿ ಖಿಲಾಫತ್ ಚಳುವಳಿ ನಡೆಯಿತು. ಅದನ್ನು ಬ್ರಿಟಿಷರು ಅತ್ಯುಗ್ರವಾಗಿ ಬಗ್ಗು ಬಡಿದರು. ಯಾವಾಗ ಖಿಲಾಫತ್ ವಿಫಲವಾಯಿತೋ ಆ ಮತಾಂಧರು ಹಿಂದುಗಳ ಮೇಲೆ ಮುಗಿಬಿದ್ದರು ಕೇರಳದಲ್ಲಿ ಮುಸ್ಲಿಂ ಪಾತಕಿಗಳಿಂದ ದೋಂಬಿ , ಗಲಭೆ,ಹತ್ಯೆ, ಕ್ರೌರ್ಯ, ಅತ್ಯಾಚಾರ, ಬೆಂಕಿ, ಆಸ್ತಿಪಾಸ್ತಿ ಲೂಟಿ, ಅವ್ಯಾಹತವಾಗಿ ನಡೆಯಿತು. ಸಾವಿರಾರು ಹಿಂದುಗಳ ಹತ್ಯೆ, ಅತ್ಯಾಚಾರ, ನಡೆದು ಸಾವಿರಾರು ಮಂದಿ ನಿರಾಶ್ರಿತರಾದರು.
ಆ ಖಿಲಾಫತ್ ಮಾನಸಿಕತೆ, ಡೋಂಗಿ ಸೆಕ್ಯುಲರ್ ವಾದಿಗಳ ರಕ್ಷಣೆ - ಪ್ರೋತ್ಸಾಹದಡಿಯಲ್ಲಿ ಕಳೆದ 73 ವರ್ಷಗಳಿಂದ ಜೀವಂತವಾಗಿ ಉಳಿದುಕೊಂಡಿದೆ.
ಆ ಖಿಲಾಫತ್ ಮಾನಸಿಕತೆಯ ನರಪಿಶಾಚಿಗಳಿಗೆ ಗಲಭೆಯೆಬ್ಬಿಸಲು ಯಾವುದಾದರೊಂದು ಸಣ್ಣ ಕಾರಣ ಸಾಕಾಗುತ್ತದೆ. ಆ ಕಾರಣಕ್ಕಾಗಿ ಅವರು ಕಾಯುತ್ತಿರುತ್ತಾರೆ, ಅಥವಾ ಹುಡುಕುತ್ತಿರುತ್ತಾರೆ , ಇಲ್ಲವೇ ಸೃಷ್ಟಿಸುತ್ತಾರೆ.
ಕೆಲ ಉದಾಹರಣೆಗಳು :
ವಿದೇಶದಲ್ಲಿ ಸಲ್ಮಾನ್ ರಶ್ದಿ ಬರೆದ '' ದಿ ಸೆಟಾನಿಕ್ ವರ್ಸಸ್ " ಎಂಬ ಪುಸ್ತಕದ ವಿರುದ್ಧ ಧಿಲ್ಲಿಯಲ್ಲಿ ಪೋಲೀಸರೊಬ್ಬರ ಮೇಲೆ ಈ ಖಿಲಾಫತ್ ಗೂಂಡಾಗಳು ಚೂರಿ ಹಾಕಿದರು.
ಕೇರಳದಲ್ಲಿ ಪ್ರಶಸ್ತಿ ಪಡೆದ "ಮಹಮ್ಮದ್ ದಿ ಈಡಿಯೆಟ್ " ಎಂಬ ಲೇಖನ, ಕರ್ನಾಟಕದಲ್ಲಿ Deccan Herald ಪತ್ರಿಕೆಯಲ್ಲಿ ಪ್ರಕಟ ಆಯ್ತು. ಆದರೆ ಆದನ್ನು ವಿರೋಧಿಸಿ ಬೆಂಗಳೂರಿನ ಶಿವಾಜಿ ನಗರದಲ್ಲಿ ಹಿಂದುಗಳ ಮನೆ, ಅಂಗಡಿ, ಆಸ್ತಿಪಾಸ್ತಿ, ಜನರ ಮೇಲೆ ಅವ್ಯಾಹತ ಧಾಳಿ ನಡೆಯಿತು, ಅಲ್ಲಿನ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ.
ಪೊಲೀಸರು, ತಮ್ಮ ವಾಹನದ ಅಡಿಯಲ್ಲಿ ಮಲಗಿ ಗುಂಡು ಹಾರಿಸಿ ಗಲಭೆಯನ್ನು ಹತೋಟಿಗೆ ತರಬೇಕಾಯ್ತು.
ಸಿದ್ಧರಾಮಯ್ಯನವರ ಆಡಳಿತದಲ್ಲಂತೂ ಖಿಲಾಫತ್ ಮಾನಸಿಕತೆ ವಿಜ್ರಂಭಿಸಿತು. 24 ಹಿಂದು ಕಾರ್ಯಕರ್ತರ ಹತ್ಯೆ ನಡೆಯಿತು. ಅವರ ಆಡಳಿತ ಕಾಲದಲ್ಲಿ ಖಿಲಾಫತ್ ಪುಂಡರಿಗೆ ಪೂರ್ಣ ರಕ್ಷಣೆ ಸಿಕ್ಕಿತು. ಮುಸ್ಲಿಂ ಮತಾಂಧರ ಮೇಲಿದ್ದ ಮೊಕದ್ದಮೆಗಳನ್ನು ಹಿಂತೆಗೆಯಲಾಯಿತು.
CAA ಪ್ರತಿಭಟನೆ ಹೆಸರಲ್ಲಿ ಮಂಗಳೂರನ್ನು ಮತಾಂಧರು ತಮ್ಮ ಕೈವಶ ಮಾಡುವ ಭಾರೀ ಯೋಜನೆ ಹಾಕಿದ್ರು. ಆದರೆ ಅದೃಷ್ಟವಶಾತ್ ಮಂಗಳೂರಿನ ಆಗಿನ ಗೌರವಾನ್ವಿತ ಕಮಿಷನ್ ರವರ ದಿಟ್ಟಕ್ರಮದಿಂದ ಮಂಗಳೂರು ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಬೆಂಕಿ ಹಚ್ಚುವ ಮತಾಂಧರ ಯೋಜನೆ ವಿಫಲವಾಯಿತು.
ಕಾಂಗ್ರೆಸ್ ಶಾಸಕರಿರುವ ಪಾದರಾಯಣಪುರದಲ್ಲಿ ಕೆಲ ತಿಂಗಳ ಹಿಂದೆ ಇದೇ ರೀತಿಯ ಅನಾಚಾರ ನಡೆಸಿದ್ದೂ ಇದೇ ಮತಾಂಧರು.
ಕಾಂಗ್ರೆಸ್ ಶಾಸಕರಿರುವ ಮೈಸೂರಿನಲ್ಲಿ ಇದೇ ರೀತಿ ದೋಂಬಿ ನಡೆಸಿದ್ದು ಇದೇ ಮತಾಂಧ ನರರಾಕ್ಷಸರು. ಬಹಳ ವರ್ಷಗಳ ಹಿಂದೆ ಕಾಶ್ಮೀರದಲ್ಲಿ "ಹಜರತ್ ಬಾಲ್ "ಮಸೀದಿಯಲ್ಲಿ ಇದ್ದ ಪ್ರವಾದಿಯವರ ಕೂದಲು ಕಾಣೆಯಾದ ನೆಪದಲ್ಲಿ ಹಿಂದುಗಳ ಮೇಲೆ ಬಾರೀ ಧಾಳಿ ನಡೆಯಿತು. CAA ವಿರೋಧದ ಹೆಸರಲ್ಲಿ ದೇಶದಾದ್ಯಂತ ಭಾರಿ ದೊಂಬಿ ನಡೆಸಿದರು.
ಸ್ವಾತಂತ್ರ್ಯ ಪೂರ್ವದ ಮುಸ್ಲಿಮ್ ಲೀಗ್ ನ ಖಿಲಾಫತ್ ಮಾನಸಿಕತೆ ಸ್ವತಂತ್ರ ಭಾರತದಲ್ಲಿ ಸದಾ ಜೀವಂತವಾಗಿಡುವಲ್ಲಿ ನಿರಂತರ ಶ್ರಮಿಸುತ್ತಿರುವ ಮತಾಂಧ- ದೇಶದ್ರೋಹಿ ಸಂಘಟನೆಗಳಲ್ಲಿ ಎಸ್. ಡಿ. ಪಿ. ಐ., ಪಿ.ಎಫ್.ಐ, ಕೆ.ಎಫ್. ಡಿ. ಗಳೂ ಇಂದು ಮುಂಚೂಣಿಯಲ್ಲಿವೆ.
ಮತ್ತೆ ಮತ್ತೆ ತನಿಕೆಗಲಿಂದ ಎಲ್ಲಾ ಹತ್ಯೆ, ಗಲಭೆ, ಲೂಟಿ, ದೇಶದ್ರೋಹೀ ಕೃತ್ಯಗಳಲ್ಲಿ ಈ ಸಂಘಟನೆಗಳ ಪಾತ್ರ ಇದೆ ಎಂದು ಕಂಡುಬಂದಿದ್ದರೂ, ಡೋಂಗಿ, ಸೆಕ್ಯೂಲರ್ ಸರಕಾರವಾಗಲೀ, ನೈಜ ಸೆಕ್ಯೂಲರ್ ಸರಕಾರವಾಗಲಿ, ಆ ಮತಾಂಧ ಸಂಘಟನೆಗಳ ಮೇಲೆ ಕಠಿಣ ಕಾನೂನುಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಭಾರಿ ಅಪಾಯಕಾರಿ ಲಕ್ಷಣ . ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಭಾರೀ ಗಂಡಾಂತರ ಕಾದಿದೆ, ಎಂಬುದು ನೆನಪಿರಲಿ.
ಖಿಲಾಫತ್ ಮಾನಸಿಕತೆಯ ಮತಾಂಧರು ಅಧಿಕ ವಾಗಿರುವೆಡೆಯಲ್ಲೆಲ್ಲ ಕಳೆದ ಅನೇಕ ವರ್ಷ ಗಳಿಂದ ನಡೆದುಕೊಂಡು ಬಂದಿರುವ ಈ ರೀತಿಯ ದೇಶದ್ರೋಹೀ ಕೃತ್ಯಗಳು ಇಂದು ಮತ್ತೆ ಗರಿಗೆದರು ತ್ತಿದೆ.
ಇಂತಹ ಸಮಾಜಘಾತುಕ - ದೇಶದ್ರೋಹೀ - ಮತಾಂಧ
ಶಕ್ತಿಗಳ ಅಟ್ಟಹಾಸವನ್ನು ಮಟ್ಟಹಾಕುವ ಜವಾಬ್ದಾರಿ ಆಡಳಿತ ಪಕ್ಷ - ವಿರೋಧಪಕ್ಷ - ಪೊಲೀಸ್ ಇಲಾಖೆಗೆ ಇದೆ ಎಂಬುದನ್ನು ನೆನಪು ಮಾಡುತ್ತಿದ್ದೇನೆ.
ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುವ ಮುಖ್ಯಮಂತ್ರಿಯ ಸಂಕಲ್ಪ, ಜಾತ್ಯತೀತ - ಸಹಬಾಳ್ವೆಯ ಕರ್ನಾಟಕ ನಿರ್ಮಾಣದ ಸೆಕ್ಯುಲರ್ ವಾದಿಗಳ ಕನಸು.
ಸಾಕಾರವಾಗಬೇಕಾದರೆ ಕ್ರಿಮಿನಲ್ ಮಾಸನಿಕತೆಯ, ಮತಾಂಧ ,ದೇಶದ್ರೋಹಿಗಳನ್ನು ಮಟ್ಟ ಹಾಕಲೇ ಬೇಕಾಗಿದೆ.
ಓಟಿನ ರಾಜಕೀಯದ ಮತೀಯ ತುಷ್ಟೀಕರಣದಿಂದ ಮತ್ತೆ ಸಮಾಜದಲ್ಲಿ ಅಶಾಂತಿ - ಗಲಭೆ - ಅನಾಹುತ ಮಾತ್ರ ಕಾಣಬಹುದು.
ಆದುದರಿಂದ ಕಾನೂನನ್ನು - ಸಂವಿಧಾನವನ್ನು ಧಿಕ್ಕರಿಸುವ, ಖಾಸಗಿ - ಸರಕಾರಿ ಆಸ್ತಿಪಾಸ್ತಿ ಹಾಳುಮಾಡುವ, ಮತಾಂಧತೆಯ ಅಮಲಿನಿಂದ ಹಿಂಸೆ - ಕ್ರೌರ್ಯ - ಅನಾಚಾರ - ಅತ್ಯಾಚಾರದ ಅಟ್ಟಹಾಸವ ಗೈವ ಪಾತಕಿಗಳನ್ನು - ದೇಶದ್ರೋಹೀಗಳನ್ನು ಅತ್ಯಂತ ಕಠಿಣವಾಗಿ- ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಿ.
ಇದು ಸಮಾಜದ, ಸಾಮರಸ್ಯದ ಸಹಬಾಳ್ವೆಗೆ ಅತೀ ಅನಿವಾರ್ಯ ಎಂದು ರಾಧಾಕೃಷ್ಣ ಅಡ್ಯಂತಾಯ ಗುಡುಗಿದ್ದಾರೆ.





0 Comments