ಹಿಂದೂ ಜಾಗರಣ ವೇದಿಕೆ ಕೌಡಿಚಾರು ಘಟಕದ ವತಿಯಿಂದ ಕೌಡಿಚಾರಿನ ಮಿನೋಜಿಕಲ್ಲು ಎಂಬಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಹಳೆಯ ಸೇತುವೆಯ ತಡೆಗೋಡೆಯು ಇತ್ತೀಚಿನ ದಿನಗಳಲ್ಲಿ ಹಾನಿಗೊಳಗಾಗಿ ವಾಹನ ಸವಾರರಿಗೆ ಅಪಾಯವನ್ನೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿತ್ತು , ಹಾಗೂ ಹಲವಾರು ಅವಘಡಗಳು ಸಂಭವಿಸಿ ಸಾವು ನೋವಿಗೂ ಕಾರಣವಾಗಿತ್ತು. ಈ ಅವ್ಯವಸ್ಥೆಯನ್ನು ಕಂಡ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಶ್ರೀ ಉದಯರವಿಯವರ ಸಾಮಾಜಿಕ ಕಳಕಳಿಯಿಂದ ಸ್ಥಳಕ್ಕೆ ಬಂದು ಸ್ಥಳೀಯರಲ್ಲಿ ತಡೆಬೇಲಿ ನಿರ್ಮಿಸಲು ವಿನಂತಿಸಿಕೊಂಡಿದ್ದರು. ಇದನ್ನು ಅರಿತ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು ಸೇತುವೆಗೆ ತಡೆಬೇಲಿ ನಿರ್ಮಿಸಲು ಕಾರ್ಯ ಪ್ರವೃತ್ತರಾಗಿ ತಡೆಬೇಲಿ ನಿರ್ಮಿಸಲಾಗಿದೆ. ಈ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.





0 Comments