ಎಸೆಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಮಾರ್ಕ್ ಪಡೆದ ಅಜ್ಜಾವರದ ಪ್ರೌಡಶಾಲೆ ವಿದ್ಯಾರ್ಥಿ,ರಕ್ಷಿತ್ ಬಿ.ಆರ್ ಅವರ ಮುಂದಿನ ವಿದ್ಯಭ್ಯಾಸಕ್ಕಾಗಿ ತನಗೆ ಬಂದಿದ್ದ. ಸ್ಕಾಲರ್ಶಿಪ್ ಹಣ ನೀಡಿ ವಿದ್ಯಾರ್ಥಿನಿಯೊಬ್ಬಳು ಮಾದರಿ ಆಗಿದ್ದಾರೆ.
ರಕ್ಷಿತ್ 563ಅಂಕಗಳೊಂದಿಗೆ. ತೇರ್ಗಡೆಯಾಗಿದ್ದು.ನೆಲ್ಯಡ್ಕದ ಅಬ್ದುಲ್ ಕುಂಞ ಅವರ ಪುತ್ರಿ ವಿವೇಕಾನಂದ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿನಿ ವಿದ್ಯಾರ್ಥಿನಿ ಮುಮ್ತಾಜ್ ಅವರ ಸ್ಕಾಲರ್ಶಿಪ್ ಹಣ ನೀಡಿ ಮುಂದಿನ ವಿದ್ಯಾಭ್ಯಾಸಕ್ಕೆ ಬಳಸಲು ಹೇಳಿದ್ದಾರೆ.
ಆತನ ಸಾಧನೆ ಕಂಡು ಖುಷಿ ಆಯಿತು .ಏನು ನೀಡುವುದೆಂದು ಯೋಚಿಸಿದಾಗ ಕಳೆದ ವರ್ಷದ ಸ್ಕಾಲರ್ಶಿಪ್ ಹಣವನ್ನು ನೀಡುವುದಾಗಿ ನಿರ್ಧರಿಸಿ ಆತನಿಗೆ ಸಹಾಯ ಮಾಡಿದೆ.ಆತ ಮೆಡಿಕಲ್ ಫೀಲ್ಡ್ ಓದಲು ಬಯಸುತ್ತಾರೆ ಸಹೃದಯರು ಸಹಕರಿಸಬೇಕು ಎಂದು ಮುಮ್ತಾಜ್ ಹೇಳಿದರು.





0 Comments