Ticker

6/recent/ticker-posts

Header Ads Widget

Responsive Advertisement

ಗಿರೀಶ್ ಚಂದ್ರ ಮುರ್ಮು ಭಾರತದ ನೂತನ ಸಿ.ಎ.ಜಿ ಆಗಿ ನೇಮಕ ಗೊಂಡಿದ್ದಾರೆ

 


 


ನವದೆಹಲಿ: ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ನಿನ್ನೆ ರಾಜೀನಾಮೆ ಸಲ್ಲಿಸಿದ್ದ ಗಿರೀಶ್ ಚಂದ್ರ ಮುರ್ಮು ಅವರನ್ನು ನೂತನ ಕಂಪ್ಟ್ರೋಲರ್ ಆಯಂಡ್ ಆಡಿಟ್ ಜನರಲ್​(ಸಿಎಜಿ) ಆಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ನಿನ್ನೆ ತಡರಾತ್ರಿ ಈ ನಿರ್ಣಯವನ್ನು ಕೇಂದ್ರ ಸರ್ಕಾರ ಘೋಷಿಸಿದೆ ಎಂದು ಐಎಎನ್​ಎಸ್ ವರದಿ ಮಾಡಿದೆ.

ಜಮ್ಮು-ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ ಸರಿಯಾಗಿ ಒಂದು ವರ್ಷವಾಗಿತ್ತು ನಿನ್ನೆಗೆ. ನಿನ್ನೆಯೇ ಮುರ್ಮು ರಾಜೀನಾಮೆ ನೀಡಿದಾಗ ಅವರಿಗೆ ಮಹತ್ವದ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರ ನೀಡಲಿದೆ. ಬಹುಶಃ ಅವರು ಮಹಾಲೇಖಪಾಲರಾಗಬಹುದು ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಧ್ವನಿಸಿತ್ತು. ಮುರ್ಮು ಅವರ ರಾಜೀನಾಮೆಯಿಂದ ತೆರವಾದ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್​ ಸ್ಥಾನಕ್ಕೆ ಇಂದು ಬೆಳಗ್ಗೆ ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹಾ ನೇಮಕವಾಗಿದ್ದಾರೆ.

 



Post a Comment

0 Comments