ಹಿಂದು ಜಾಗರಣ ವೇದಿಕೆ ಪುತ್ತೂರು ವತಿಯಿಂದ ಎಸ್.ಡಿ.ಪಿ.ಐ,ಕೆ.ಎಫ್.ಡಿ, ಪಿ.ಎಫ್.ಐ.ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಉಪ ವಿಭಾಗದ ಸಹಾಯಕ ಆಯುಕ್ತರ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಸಂಘಟನೆಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರಕಟ್ಟೆ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ರೈ,ಈಶ್ವರಮಂಗಲ ತಾಲ್ಲೂಕು ಉಪಾಧ್ಯಕ್ಷ-ಶಶಿಕಾಂತ್ ಕೋರ್ಟ್ ರೋಡ್,ನಗರ ಉಪಾಧ್ಯಕ್ಷ ಗೀತೇಶ್ ಮುನ್ನ,ನಗರ ಕಾರ್ಯದರ್ಶಿ ರಾಜ ಕೋರ್ಟ್ ರೋಡ್,ತಾಲೂಕು ಮಾತೃ ಸುರಕ್ಷಾ ಪ್ರಮುಖ್ ಸ್ವಸ್ತಿಕ್ ಮೇಗಿನಗುತ್ತು,ಬನ್ನೂರು ಘಟಕದ ಅಧ್ಯಕ್ಷ ಮನೀಶ್ ಬಿರ್ವ,ತ್ಯಾಗರಾಜನಗರದ ಅಧ್ಯಕ್ಷ ಸುನಿಲ್ ತ್ಯಾಗರಾಜನಗರ,ನ್ಯಾಯವಾದಿ ಗೌರೀಶ್ ಮತ್ತು ಸಂದೇಶ್ ಮತ್ತಿತರರು ಉಪಸ್ಥಿತರಿದ್ದರು .
0 Comments