Ticker

6/recent/ticker-posts

Header Ads Widget

Responsive Advertisement

ಕೊಳ್ತಿಗೆಯಲ್ಲಿ ಎಸೆಸೆಲ್ಸಿ ಸಾಧಕಿ ಹಾಗೂ ಮುಂಬಡ್ತಿ ಪಡೆದ ಅಧಿಕಾರಿಗೆ ಸನ್ಮಾನ

 


 


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಪುತ್ತೂರು  ಕೊಳ್ತಿಗೆ A ಮತ್ತು B ಒಕ್ಕೂಟ  ಇದರ ವತಿಯಿಂದ  ಷಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿ, ಇಲ್ಲಿನ 10ನೇ ತರಗತಿ ವಿದ್ಯಾರ್ಥಿನಿಯಾದ ಕುಮಾರಿ ಹರ್ಷಿತಾ, 2019/20 ನೇ ಸಾಲಿನ SSLC ಪಬ್ಲಿಕ್ ಪರೀಕ್ಷೆಯಲ್ಲಿ 96.6% ಅಂಕವನ್ನು ಗಳಿಸಿರುತ್ತಾರೆ ಇವರಿಗೆ ಹಾಗೂ ಪುತ್ತೂರು ತಾಲೂಕು ಯೋಜನಾಧಿಕಾರಿಯಾಗಿ ಇದ್ದು ಇವಾಗ ನಿರ್ದೇಶಕರಾಗಿ  ಮುಂಬಡ್ತಿ ಹೊಂದಿದ ಜನಾರ್ದನ ಇವರಿಗೆ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಳ್ತಿಗೆ A ಮತ್ತು B ಒಕ್ಕೂಟದ ವತಿಯಿಂದ ಸನ್ಮಾನ ಹಾಗೂ  ಅಭಿನಂದನೆಯನ್ನು ಸಲ್ಲಿಸಲಾಯಿತು, ಕು| ಹರ್ಷಿತಾ ರವರನ್ನು ಜನಾರ್ದನ, ತಾಲೂಕಿನ ಯೋಜನಾಧಿಕಾರಿ ಶಾಲನ್ನು ಹಾಕಿ ಸನ್ಮಾನಿಸಿ ಅಭಿನಂದಿಸಿದರು. ಹಾಗೇನೇ ನಿರ್ದೇಶಕರಾಗಿ ಮುಂಬಡ್ತಿ ಹೊಂದಿದ ಪುತ್ತೂರು ತಾಲೂಕಿನ ಯೋಜನಾಧಿಕಾರಿ ಜನಾರ್ದನ ಇವರಿಗೆ ಶಾಲಾ ಮುಖ್ಯ ಗುರುಗಳಾದ ವಿಷ್ಣುಮೂರ್ತಿ ಯವರು ಶಾಲು ಹಾಕಿ ಸನ್ಮಾನಿಸಿ ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ಕೊಳ್ತಿಗೆ A ಮತ್ತು B ಒಕ್ಕೂಟದ ಅಧ್ಯಕ್ಷರಾದ ಯಶೋಧ ಹಾಗೂ ವಸಂತ ದುಗ್ಗಲ, ಶಾಲಾ ಮುಖ್ಯ ಗುರುಗಳಾದ ವಿಷ್ಣು ಮೂರ್ತಿ, ವಲಯ ಮೇಲ್ವಿಚಾರಕಿ ಶ್ರುತಿ , ಮಾಜಿ ವಲಯಾಧ್ಯಕ್ಷರಾದ ಉದಯ ಕುಮಾರ್ ಗೊಳಿತಡ್ಕ , ಸೇವಾಪ್ರತಿನಿದಿಗಳಾದ ಶಾರದ, ರಮ್ಯ ಹಾಗು ಎರಡು ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ಕು| ಹರ್ಷಿತಾ ರವರು ಮಾಲೆತ್ತೋಡಿ ರಾಜು ಗೌಡ ಮತ್ತು ಭಾಗೀರಥಿ ದಂಪತಿಗಳ ಪುತ್ರಿ.

 



Post a Comment

0 Comments