ಚಿರಂಜೀವಿ ಸರ್ಜಾ ಪತ್ನಿ, ನಟಿ ಮೇಘನಾ ರಾಜ್ ಅವರಿಗೆ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದರಿಂದಾಗಿ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಿಶ್ಚಿತಾರ್ಥದ ದಿನವೇ ಮಗುವಿಗೆ ಜನ್ಮ ನೀಡಿರುವುದು ಇನ್ನೂ ವಿಶೇಷವಾಗಿದೆ.ಜೂನಿಯರ್ ಚಿರು ಕುರಿತು ಅಕ್ಟೋಬರ್ 16ರಂದು ಧ್ರುವ ಸರ್ಜಾ ವಿಡಿಯೋ ಮಾಡುವ ವೆಲ್ ಕಮ್ ಹೇಳಿದ್ದರು. ಅವರ ನಿರೀಕ್ಷೆಯಂತೆ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಮೂಲಕ ಜೂನಿಯರ್ ಚಿರು ಆಗಮಿಸಿದಂತಾಗಿದೆ. ಇನ್ನೂ ವಿಶೇಷ ಎಂಬಂತೆ ಚಿರು, ಮೇಘನಾ ನಿಶ್ಚಿತಾರ್ಥದ ದಿನವೇ ಮರಿ ಚಿರು ಆಗಮನ ಸರ್ಜಾ ಕುಟುಂಬಸ್ಥರಲ್ಲಿ ತುಂಬಾ ಸಂತಸವನ್ನುಂಟು ಮಾಡಿದೆ. ಕುಟುಂಬ ಎಲ್ಲ ಸದಸ್ಯರು ಸಂಭ್ರಮಿಸುತ್ತಿದ್ದಾರೆ.





0 Comments