Ticker

6/recent/ticker-posts

Header Ads Widget

Responsive Advertisement

ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ಅರೆಸ್ಟ್

 


 


ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕೋವಿಡ್ ನಿಯಮವನ್ನು ಗಾಳಿಗೆ ತೂರಿ ಮುಂಬೈ ಡ್ರಾಗನ್ ಫ್ಲೈ ಕ್ಲಬ್​ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಇದನ್ನು ಅರಿತ ಪೊಲೀಸರು ಇಲ್ಲಿಗೆ ರೈಡ್ ಮಾಡಿದ್ದು ಸುರೇಶ್ ರೈನಾ, ಖ್ಯಾತ ಗಾಯಕ ಗುರು ರಾಂಧವ ಸೇರಿದಂತೆ ಒಟ್ಟು 34 ಜನರನ್ನು ನಿನ್ನೆ ತಡ ರಾತ್ರಿ ಬಂಧಿಸಿದ್ದಾರೆ. ಸದ್ಯ ಸುರೇಶ್ ರೈನಾ ಜಾಮೀನಿನಲ್ಲಿ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಬಂಧಿಸಿರುವ 34 ಜನರಲ್ಲಿ ಏಳು ಜನ ಕ್ಲಬ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದವರು ಎನ್ನಲಾಗಿದೆ. ಈ ಬಗ್ಗೆ ಎಸ್​ಆರ್​​ ಪಿ ಸಹಾರ್ ಪೊಲೀಸರು ಖಚಿತ ಮಾಹಿತಿ ನೀಡಿದ್ದಾರೆ.

ಮುಂಬೈ ವಿಮಾನ ನಿಲ್ದಾಣದ ಸಮೀಪದ ಡ್ರಾಗನ್ ಫ್ಲೈ ಕ್ಷಬ್​ಮೇಲೆ ಮಂಗಳವಾರ ನಸುಕಿನ 2.30ರ ವೇಳೆ ಈ ದಾಳಿ ನಡೆದಿದೆ. ಕ್ಲಬ್‌ನಲ್ಲಿನ ಏಳು ಸಿಬ್ಬಂದಿ ಸೇರಿದಂತೆ ಅಲ್ಲಿದ್ದವರನ್ನು ಬಂಧಿಸಲಾಗಿದೆ.

 



Post a Comment

0 Comments