ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ಆವರಣದಲ್ಲಿ ಮೌನೇಶ್ ವಿಶ್ವಕರ್ಮ ಮತ್ತು ತಂಡದ ಸದಸ್ಯರಿಂದ ಜನಜಾಗೃತಿ ಮೂಡಿಸುವ ' ಸಂಸಾರ ' ಎಂಬ ಶೀರ್ಷಿಕೆಯ ಬೀದಿ ನಾಟಕ ಪ್ರದರ್ಶನವು ಆಯಿತು.ಸರ್ಕಾರದ ಯೋಜನೆಗಳಾದ ಕೃಷಿ,ಆರೋಗ್ಯ ,ಶಿಕ್ಷಣ ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಹಾಗೂ ಪ್ರಯೋಜನ ಪಡೆಯುವಂತೆ ಆಯೋಜನೆಗೊಂಡ ಬೀದಿನಾಟಕ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ ಅವರು ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಬೀದಿ ನಾಟಕಗಳೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಶ್ರೀ ದಾಮೋದರ ಗೌಡ ಕನಜಾಲು ಅವರು ಮಾತನಾಡಿ ಬೀದಿ ನಾಟಕ ಸಮಾಜಕ್ಕೆ ಮೌಲ್ಯಗಳನ್ನು ರವಾನಿಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಭೋದಕೇತರ ವೃಂದ ಹಾಗೂ ವಿದ್ಯಾರ್ಥಿಗಳು ನೆರೆದಿದ್ದರು.
0 Comments