ಬೆಟ್ಟಂಪಾಡಿ:ಪ್ರಸ್ತುತ ಜಗತ್ತಿನಲ್ಲಿ ಹೆಚ್ಚುತ್ತಿರುವ ಸ್ಪರ್ಧೆಗಳನ್ನು ಸಮರ್ಥವಾಗಿ ಎದುರಿಸುವ ಕೌಶಲವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಪುತ್ತೂರು ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಇಲ್ಲಿನ ಸಹ ಪ್ರಾಧ್ಯಾಪಕ ಡಾ.ಗೋಪಾಲಕೃಷ್ಣ ಹೇಳಿದರು.ಇವರು ಸ.ಪ್ರ.ದ.ಕಾಲೇಜು ಬೆಟ್ಟಂಪಾಡಿ ಇಲ್ಲಿ ನಡೆದ ವಾಣಿಜ್ಯ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ವಾಣಿಜ್ಯ ವಿಷಯದ ಬಗ್ಗೆ ಹೆಚ್ಚು ಪರಿಣಿತಿ ಪಡೆಯುವುದರ ಜೊತೆಗೆ ಅತೀ ಹೆಚ್ಚು ಬೇಡಿಕೆಯಿರುವ ಕೌಶಲ್ಯಗಳನ್ನು ಕೂಡ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ವಾಣಿಜ್ಯ ಸಂಘದ ಕಾರ್ಯಕ್ರಮಗಳು ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗಿ ಇರಲಿ ಎಂದು ಆಶಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ ಅವರು ಮಾತನಾಡಿ ಪ್ರಸ್ತುತ ಅತಿ ಹೆಚ್ಚು ಬೇಡಿಕೆ ಇರುವ ಬಿಕಾಂ ಪದವಿಯ ವಿದ್ಯಾರ್ಥಿಗಳು ಮುಂದೆ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಹಾಗೂ ಈ ಸಂಘದ ಕಾರ್ಯ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಹೊಸ ಕೌಶಲ್ಯಗಳು ತುಂಬಲಿ ಎಂದು ಹಾರೈಸಿದರು.
ಇತೀಚೆಗೆ ಭಾರತೀಯ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿ ಪಡೆದಿರುವ ಡಾ.ಗೋಪಾಲಕೃಷ್ಣ ಕೆ ಅವರನ್ನು ವಾಣಿಜ್ಯ ವಿಭಾಗದ ವತಿಯಿಂದ ಸನ್ಮನಿಸಲಾಯಿತು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಹರಿಪ್ರಸಾದ್ ಎಸ್ ಮಾತನಾಡುತ್ತಾ ವಾಣಿಜ್ಯ ಸಂಘದಲ್ಲಿನ ಸಕ್ರೀಯ ಭಾಗವಹಿಸುವಿಕೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಪೂರಕ ವೇದಿಕೆಯನ್ನು ನಿರ್ಮಾಣ ಮಾಡುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಾಣಿಜ್ಯ ಸಂಘದ ಸಂಚಾಲಕರಾದ ದೀಕ್ಷಿತ್ ಕುಮಾರ್,ಉಪನ್ಯಾಸಕ ವೃಂದದ ದಾಮೋದರ ಗೌಡ ಕೆ,ಶ್ರೀ ವೆಂಕಟಕೃಷ್ಣ ಭಾಗವತ್, ರಾಮ ಕೆ, ಡಾ. ಪೊಡಿಯಾ ಉಪಸ್ಥಿತರಿದ್ದರು.ವಾಣಿಜ್ಯ ಸಂಘದ ಅಧ್ಯಕ್ಷೆ ಕು.ದೀಪಿಕಾ ಬಿ,ಕಾರ್ಯದರ್ಶಿ ಕು.ಧನ್ಯಶ್ರೀ ಅಂಗ್ರಾಜೆ ಮತ್ತು ಖಜಾಂಜಿ ರಾಕೇಶ್ ರೈ ಪಿಎಂ ಉಪಸ್ಥಿತರಿದ್ದರು.ಹರಿಪ್ರಸಾದ್ ಎಸ್ ಸ್ವಾಗತಿಸಿದರು, ಕು ಧನ್ಯಾಶ್ರೀ ಅಂಗ್ರಾ ವಾರ್ಷಿಕ ಕಾರ್ಯಕ್ರಮಗಳ ಕಾರ್ಯಸೂಚಿಯನ್ನು ಮಂಡಿಸಿದರು.ಮಹೇಶ್ ಕೆ ಎಂ ವಂದಿಸಿದರು.ಜೀವನ್ ಜಿ ಕಾರ್ಯಕ್ರಮ ನಿರೂಪಿಸಿದರು.





0 Comments