Ticker

6/recent/ticker-posts

Header Ads Widget

Responsive Advertisement

ಜೂನ್ 7ರ ಬಳಿಕವೂ ಲಾಕ್ ಡೌನ್ ಆಗೋದು ಬಹುತೇಕ ಖಚಿತ

 


 


ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಕರ್ನಾಟಕದಲ್ಲಿ ಜೂನ್​ 7ರ ತನಕ ಹೇರಲಾಗಿರುವ ಲಾಕ್​ಡೌನ್​ ಇನ್ನಷ್ಟು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,000 ಹಾಗೂ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 500ಕ್ಕೆ ಇಳಿಯುವವರೆಗೂ ಪೂರ್ಣ ಪ್ರಮಾಣದಲ್ಲಿ ಅನ್‌ಲಾಕ್ ಮಾಡದಿರುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಲಾಕ್​ಡೌನ್​ಗೆ ಜನರ ಸ್ಪಂದನೆ ಇರುವುದರಿಂದ ಜೂನ್​ ಮಧ್ಯದ ತನಕವೂ ಲಾಕ್​ಡೌನ್ ವಿಸ್ತರಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕೊವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೂನ್ 5ರಂದು ಇನ್ನೊಂದು ಸುತ್ತಿನ ಸಭೆ ನಡೆಸಲಿದ್ದು, ಆ ಸಭೆಯಲ್ಲಿ ಅಧಿಕೃತ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಕೊರೊನಾ ಚೈನ್ ಲಿಂಕ್ ಕತ್ತರಿಸಲು ಅಧಿಕಾರಿಗಳು ಮತ್ತಷ್ಟು ದಿನದ ಕಾಲಾವಕಾಶ ಕೇಳಿದ್ದು, ಸದ್ಯಕ್ಕೆ ಯಥಾಸ್ಥಿತಿ ಮುಂದುವರೆಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಧ್ಯವಾದಷ್ಟು ಲಾಕ್​ಡೌನ್ ಈಗಲೇ ಮಾಡುವುದು ಉತ್ತಮ ಎಂದಿರುವ ತಜ್ಞರು. ಅನ್​ಲಾಕ್​ ಮಾಡಿ ಮತ್ತೆ ಸೋಂಕು ಹೆಚ್ಚಾದರೆ ತೊಂದರೆಯಾಗುತ್ತದೆ. ಹೀಗಾಗಿ, ಲಾಕ್​ಡೌನ್ ವಿಸ್ತರಿಸಿ ಲಸಿಕೆ ಪ್ರಮಾಣ ಹೆಚ್ಚಿಸಬೇಕು. ಶೇ.60 ರಷ್ಟು ಜನರಿಗೆ ಲಸಿಕೆ ತಲುಪಿಸಲು ತುರ್ತಾಗಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜೂನ್ ಪೂರ್ತಿ ಲಾಕ್ ಡೌನ್ ಆಗುವುದು ಖಚಿತ ಎನ್ನಲಾಗಿದೆ.

 



Post a Comment

0 Comments