ಪುತ್ತೂರು: ಸಂಕಷ್ಟದಲ್ಲಿ ಇರುವ ಬಡ ಜನರಿಗೆ ಊಟ, ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡಬೇಕಾದ ಶಾಸಕರು ಇಂದಿರಾ ಕ್ಯಾಂಟೀನ್ನಿಂದ ಕೇವಲ 8 ಊಟ ತಗೊಂಡು ಹೋದವರನ್ನು ಪತ್ತೆ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಆರೋಪಿಸಿದರು. ಶಾಸಕರ ಜತೆಯಲ್ಲಿದ್ದುಕೊಂಡು 94 ಸಿಯಲ್ಲಿ ಹಣ ತಗೊಂಡವರನ್ನು ಪತ್ತೆ ಮಾಡಲಾಗದ ಶಾಸಕರು ಕೇವಲ ಊಟ ತಗೊಂಡು ಹೋದವರನ್ನು ಪತ್ತೆ ಮಾಡುಲು ಮುಂದಾಗಿರುವ ಅವರು ನಾಲಾಯಕ್ ಶಾಸಕರು ಎಂದು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಆರೋಪಿಸಿದರು.
ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಾಸಕರ ಮೇಲೆ ಉತ್ತಮ ಗೌರವ, ಅಭಿಮಾನವಿತ್ತು. ಆದರೆ ಅವರಷ್ಟೊಂದು ಕೆಲಮಟ್ಟಕ್ಕೆ ಬರುತ್ತಾರೆಂದು ಊಹಿಸಿರಲಿಲ್ಲ. ಕೇವಲ ಇಂದಿರಾ ಕ್ಯಾಂಟೀನ್ನಿಂದ 8 ಊಟ ತಗೊಂಡು ಹೋದವರನ್ನು ಕೋಟಿ, ಕೋಟಿ ನುಂಗಿದವರಂತೆ ಬಿಂಬಿಸಿ ದೊಡ್ಡ ರದ್ದಾಂತ ಮಾಡಿ ಅವರನ್ನು ಶಾಸಕರು ಪತ್ತೆ ಮಾಡಿದ್ದಾರೆ. ಇದು ಅವರಿಗೆ ಮತ ನೀಡಿ ಆರಿಸಿದ ಮತದಾರರರು ದೊಡ್ಡ ಪ್ರಶಸ್ತಿ ನೀಡಬೇಕು. ಎಂಟು ಊಟ ತಗೊಂಡು ಹೋಗಿ ಅದನ್ನು ಏನು ಮಾಡಲು ಸಾಧ್ಯ. ಲಾಕರ್ನಲ್ಲಿಡಲಾಗುತ್ತದಾ? ಆದರೂ ಅದನ್ನೇ ದೊಡ್ಡ ರದ್ದಾಂತ ಮಾಡಿರುವುದು ಶಾಸಕರಿಗೆ ನಾಚಿಕೆ ಆಗಬೇಕು. ಗ್ರಾಮೀಣ ಪ್ರದೇಶದ ಕೃಷಿಕನ ಮನೆಯಲ್ಲಿ ಹುಟ್ಟಿದ ಶಾಸಕರು ಹಸಿದವರಿಗೆ ಊಟ ನೀಡುವ ಭಾರತೀಯ ಪದ್ದತಿಯನ್ನು ಮರೆತು ಊಟ ತಗೊಂಡು ಹೋದವರನ್ನು ಪತ್ತೆ ಮಾಡಿದ ಶಾಸಕರು ಆ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ. ಈ ಮೂಲಕ ಶಾಸಕರಿಗೆ ಮಾಜಿ ಶಾಸಕಿ ಆರೋಪ ಮಾಡಿದರು.





0 Comments