Ticker

6/recent/ticker-posts

Header Ads Widget

Responsive Advertisement

ಇನ್ಮುಂದೆ ರಾಜ್ಯದಲ್ಲಿ ಜಿಲ್ಲಾವಾರು ಲಾಕ್ ಡೌನ್ ನಿರ್ಣಯ

 


 


ರಾಜ್ಯ ಸುದ್ದಿ: ಕರ್ನಾಟಕದಲ್ಲಿ ಜಿಲ್ಲಾ ಮಟ್ಟದಲ್ಲಿ ಲಾಕ್​ಡೌನ್​ ವಿಸ್ತರಣೆ, ಸಡಿಲಿಕೆ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಸದ್ಯ ಯಾವ ಜಿಲ್ಲೆಗಳಲ್ಲಿ ಎಷ್ಟು ದಿನ ಲಾಕ್​ಡೌನ್​ ಇರಲಿದೆ. ಯಾವೆಲ್ಲಾ ನಿಯಮಗಳು ಜಾರಿಯಲ್ಲಿವೆ ಎಂಬ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಸಂಪೂರ್ಣ ನಿಯಂತ್ರಣಕ್ಕೆ ಬರುವ ತನಕವೂ ಜನ ಸಂಚಾರವನ್ನು ಹದ್ದುಬಸ್ತಿನಲ್ಲಿಡಲು ಸರ್ಕಾರ ಆಲೋಚಿಸುತ್ತಿದೆ. ಲಾಕ್​ಡೌನ್​ನಿಂದ ಆರ್ಥಿಕವಾಗಿ ನಷ್ಟವಾಗುತ್ತಿದೆ ನಿಯಮ ಸಡಿಲಿಸಿ ಎಂದು ಕೆಲವರು ಅಭಿಪ್ರಾಯಪಡುತ್ತಿರುವರಾದರೂ ಹೆಚ್ಚಿನ ಸಚಿವರು ಹಾಗೂ ಅಧಿಕಾರಿಗಳು ಸದ್ಯದ ಪರಿಸ್ಥಿತಿಯಲ್ಲಿ ಲಾಕ್​ಡೌನ್​ ಮುಂದುವರಿಸುವುದೇ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣಗಳಿಂದಾಗಿ ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಆಯಾ ಜಿಲ್ಲೆಗಳ ಪರಿಸ್ಥಿತಿ ನಿರ್ವಹಣೆಗೆ ಅನುವಾಗುವಂತೆ ನಿಯಮ ರೂಪಿಸಿಕೊಳ್ಳಲಾಗುತ್ತಿದೆ. ಆದರೆ, ಹಲವು ಜಿಲ್ಲೆಗಳಲ್ಲಿ ವಾರಪೂರ್ತಿ ಲಾಕ್​ಡೌನ್​ ಮಾಡಿ ಜನರನ್ನು ಮನೆಯೊಳಗೆ ಕೂರಿಸಿದರೂ, ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದ ಕೂಡಲೇ ಜನ ಗುಂಪುಗುಂಪಾಗಿ ಮಾರುಕಟ್ಟೆಗಳತ್ತ ದೌಡಾಯಿಸುತ್ತಿರುವುದು ಲಾಕ್​ಡೌನ್​ನ ಮೂಲ ಉದ್ದೇಶವೇ ವ್ಯರ್ಥವಾಗುವಂತೆ ಆಗುತ್ತಿದೆ.
ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ನಲ್ಲಿ ಇಂದು (ಮೇ 31) ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಬೆಳಗ್ಗೆ 10 ಗಂಟೆ ತನಕ ಅಗತ್ಯವಸ್ತು ಖರೀದಿಗೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಭಾಗದಿಂದ ಬಂದಿರುವ ಗ್ರಾಹಕರು ತಮಗೆ ಬೇಕಾದ ಸಾಮಾಗ್ರಿಗಳನ್ನು ಕೊಳ್ಳುತ್ತಿದ್ದಾರೆ. ಟೌನ್​ಹಾಲ್ ನಿಂದ ಚರ್ಚ್ ಸರ್ಕಲ್ ತನಕವೂ ತಳ್ಳುವ ಗಾಡಿಯಲ್ಲಿ ವ್ಯಾಪಾರ ಜೋರಾಗಿ ಸಾಗುತ್ತಿದೆ. ಇತ್ತ ಶಿವಾಜಿನಗರದಲ್ಲಿ ವಾಹನ ಹಾಗೂ ಜನರ ಓಡಾಟ ಕಡಿಮೆ ಇದೆ. ರಸೆಲ್ ಮಾರ್ಕೆಟ್​ನಲ್ಲಿ ಇಲ್ಲಿಯ ತನಕ ಜನರು ವಿರಳವಾಗಿದ್ದು, ಮಾಂಸದ ಅಂಗಡಿಗಳತ್ತ ಹೆಚ್ಚು ಜನರು ಸುಳಿದಿಲ್ಲ. ಅಲ್ಲಲ್ಲಿ ಟೀ ಅಂಗಡಿಗಳ ಮುಂದೆ ಕೆಲ ಮಂದಿ ಸೇರಿರುವುದಷ್ಟೇ ಕಂಡುಬರುತ್ತಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಶಿವಾಜಿನಗರದಲ್ಲಿ ಯುವಕರ ಗುಂಪಂದು ಲಾಕ್​ಡೌನ್​ ಇರುವುದನ್ನೂ ಲೆಕ್ಕಿಸದೇ ರಸ್ತೆಗಳಲ್ಲಿ ನಿಂತು ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಬೇಜವಾಬ್ದಾರಿ ನಡೆ ಪ್ರದರ್ಶಿಸುವುದು ಕಂಡುಬಂದಿದೆ. ರಸ್ತೆ ಕಾಮಗಾರಿಗಾಗಿ ಬಂದಿರುವ ಜೆಸಿಬಿ ಮೇಲೆ ನಿಂತು ವಿವಿಧ ಭಂಗಿಯಲ್ಲಿ ಫೋಟೋಗಳಿಗೆ ಯುವಕರು ಪೋಸ್​ ಕೊಡುತ್ತಿದ್ದಾರೆ.

 



Post a Comment

0 Comments