ನೆಲ್ಯಾಡಿ ಗ್ರಾಮದ ಪಡುಬೆಟ್ಟು ಗುರುವ ಎಂಬವರ ಮನೆಯ ಮೇಲ್ಛಾವಣಿ ಕುಸಿದು ಬೀಳುವ ಹಂತದಲ್ಲಿತ್ತು.ಇದನ್ನು ಮನಗಂಡ ಹಿಂಜಾವೇ ಕಾರ್ಯಕರ್ತರು ಸಿಮೆಂಟ್ ಶೀಟ್ ಅಳವಡಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ಇದರ ವತಿಯಿಂದ ಮನೆಯ ಮೇಲ್ಛಾವಣಿಯನ್ನು ತೆಗೆದು ಶ್ರಮದಾನದ ಮೂಲಕ ಕಾರ್ಯಕರ್ತರು ಹೊಸ ಸಿಮೆಂಟ್ ಶೀಟನ್ನು ಅಳವಡಿಸಿದರು.ಈ ಮೂಲಕ ಹಿಂಜಾವೇ ಕಾರ್ಯಕರ್ತರು ಲಾಕ್ ಡೌನ್ ಸಂದರ್ಭದಲ್ಲಿ ಕೂಡ ಸೇವಾ ಕಾರ್ಯ ಮುಂದುವರಿಸಿದ್ದಾರೆ.
0 Comments