Ticker

6/recent/ticker-posts

Header Ads Widget

Responsive Advertisement

ವಿದ್ಯಾ ಆರ್ ಗೌರಿ ಅವರ ನೇತೃತ್ವದಲ್ಲಿ ವಾರ್ಡ್ 19ರ ಟಾಸ್ಕ್ ಫೋರ್ಸ್ ಸಭೆ - ಪುತ್ತೂರು ನ್ಯೂಸ್

 


 


ವಾರ್ಡ್-19'ರಲ್ಲಿ ಟಾಸ್ಕ್'ಫೋರ್ಸ್ ಸಭೆಯು ನಗರಸಭಾ ಸದಸ್ಯೆ ಶ್ರೀಮತಿ ವಿದ್ಯಾಗೌರಿ ನೇತೃತ್ವದಲ್ಲಿ ಕಲ್ಲಿಮಾರ್ ಶ್ರೀ ಶಿವಕುಮಾರ್ ಇವರ ಮನೆಯಲ್ಲಿ ಜರುಗಿತು.

ಪೌರಾಯುಕ್ತರಾದ  ಮಧುಮನೋಹರ್ ಉಪಸ್ಥಿತರಿದ್ದು, ಕರೋನಾ ನಿಯಂತ್ರಣಕ್ಕೆ ತರುವಲ್ಲಿ ಎಚ್ಚೆತ್ತುಕೊಂಡು ಮಾಡಬೇಕಾದ ಕೆಲಸದ ಬಗ್ಗೆ ತಿಳಿಸಿದರು.
ವಿಜ್ಞಾನಿಗಳು,ತಜ್ಞರು ತಿಳಿಸಿರುವಂತೆ ಮೂರನೇ ಅಲೆಯಿಂದ ಮಕ್ಕಳ ಮೇಲೆ ಹಾನಿ ಆಗಬಹುದಾದ ಸಾಧ್ಯತೆಯಿರುವುದರಿಂದ ಮಕ್ಕಳನ್ನು ಹೊರಗಡೆ ಕರೆದು ಹೋಗದೆ ನಿಗಾವಹಿಸಬೇಕಾದ ಅವಶ್ಯಕತೆಯಿದೆಯೆಂದರು.
ಕರೋನಾ ದೃಢಗೊಂಡ ವ್ಯಕ್ತಿಯ ಮನೆಯ ಆಸುಪಾಸು ಐವತ್ತು ಮನೆಯವರು ಕರೋನಾ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವೆಂದರು.
ಲಕ್ಷಣರಹಿತ (Asymptomatic) ಆಗಿದ್ದರೂ ಕೂಡಾ ಅಷ್ಟೇ ಅಪಾಯ, ಗೊತ್ತಿಲ್ಲದೇ ಹರಡುವ ಆತಂಕ ಇದೆಯೆಂದರು.
ಡೆಲ್ಟಾಪ್ಲಸ್, ಕರೋನಾದ ಬದಲಾದ ರೂಪದ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾಗೌರಿ ಸ್ವಾಗತಿಸಿ ವಾರ್ಡ್'ನ ಕರೋನಾ ಸ್ಟೇಟಸ್ ಬಗ್ಗೆ ವರದಿ ನೀಡಿದರು.
ಮಾಜಿ ನಗರಸಭಾ ಸದಸ್ಯ  ವಿನಯ್ ಭಂಡಾರಿ  ಅವರು  ಧನ್ಯವಾದ ಸಮರ್ಪಿಸಿದರು.

ನಗರಸಭಾ ಇಂಜೀನಿಯರ್ ಶೀಧರ್,ಟಾಸ್ಕ್'ಫೋರ್ಸ್ ಟೀಮ್ ಸದಸ್ಯರಾದ ನಗರಸಭಾ ಸಿಬ್ಬಂದಿ ನಾಗೇಶ್, ಆಶಾ ಕಾರ್ಯಕರ್ತೆ ಶ್ರೀಮತಿ ವೀಣಾ ಆಚಾರ್ಯ,ಶಿವಕುಮಾರ್,ನಾಗೇಶ್ ಪ್ರಭು, ವೀಕ್ಷಿತ್ ಕಲ್ಲಿಮಾರ್, ಪುರುಷೋತ್ತಮ್ ನಾಯ್ಕ್ ಹಾಗೂ ರವಿರಾಜ್ ಉಪಸ್ಥಿತರಿದ್ದರು.

 



Post a Comment

0 Comments