ಪುತ್ತೂರು ನಗರಸಭಾ ವ್ಯಾಪ್ತಿಯ ವಾರ್ಡ್ ನಂಬರ್ 30ರಲ್ಲಿ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ ಸರಿ ಇಲ್ಲದ ಚರಂಡಿ ವ್ಯವಸ್ಥೆ.
ಸೂಕ್ತ ರೀತಿಯ ಚರಂಡಿ ವ್ಯವಸ್ಥೆ ಇಲ್ಲದೆ ಸಂಪ್ಯದ ವಾಗ್ಲೆ ರಸ್ತೆಯಲ್ಲಿ ಜನರು ಪರದಾಡುವಂತಾಗಿದೆ.ರಸ್ತೆಯಲ್ಲಿಯೇ ಚರಂಡಿ ನೀರು ಹರಿದು ಹೋಗುತ್ತಿದ್ದು ಇದರಿಂದ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಎಸ್ಟೇ ಭಾರಿ ಮನವಿ ನೀಡಿದರು ಸಂಬಂಧಪಟ್ಟವರು ಈ ಕಡೆ ಗಮನ ಹರಿಸುತ್ತಿಲ್ಲ.ಇದರಿಂದ ಆಕ್ರೋಶ ಗೊಂಡು ಜನರು ಸೂಕ್ತ ರೀತಿಯ ವ್ಯವಸ್ತೆಯನ್ನು ಆದಷ್ಟು ಬೇಗ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ.
ಈ ಮೂಲಕ ಜನರ ಮನವಿಗೆ ಸ್ಪಂದಿಸಿ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕು.
ಸಾಂಕ್ರಾಮಿಕ ರೋಗ ಹರಡಲು ಇದಕ್ಕಿಂತ ಹೆಚ್ಚು ಏನು ಬೇಕಿಲ್ಲ. ಕೋರೋನ ಸೋಂಕು ಈಗಾಗಲೇ ಜನರನ್ನು ಸಂಕಷ್ಟಕ್ಕೆ ನೂಕಿದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ವರ್ಗದವರು ಸರಿಪಡಿಸಬೇಕು.





0 Comments