Ticker

6/recent/ticker-posts

Header Ads Widget

Responsive Advertisement

60 ದಿನಗಳ ಬಳಿಕ ನಾಳೆ ಕರ್ನಾಟಕಕ್ಕೆ ಅರ್ಧ ಮುಕ್ತಿ - ಪುತ್ತೂರು ನ್ಯೂಸ್

 


 


60 ದಿನಗಳ ಲಾಕ್​ಡೌನ್ ಗ್ರಹಣಕ್ಕೆ ನಾಳೆಯಿಂದ ಅರ್ಧ ಮುಕ್ತಿ ಸಿಗುತ್ತದೆ. ಆದರೆ ಷರತ್ತುಗಳು ಅನ್ವಯ ಆಗುತ್ತದೆ.

ಬೆಂಗಳೂರು: ಇನ್ನು ಒಂದೇ ಒಂದು ದಿನ,ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ರಾಜ್ಯದ ಕಂಪ್ಲೀಟ್ ಚಿತ್ರಣ ಬದಲಾಗಲಿದೆ. ರಾಜಧಾನಿ ಬೆಂಗಳೂರು ಹಾಗೂ ಜಿಲ್ಲೆಗಳಿಗೆ ಕಳೆದೆರಡು ತಿಂಗಳಿಂದ ಹಿಡಿದಿರೋ ಲಾಕ್ಡೌನ್ ಗ್ರಹಣಕ್ಕೆ ನಾಳೆ ಸೂರ್ಯೋದಯದೊಂದಿಗೆ ಮುಕ್ತಿ ಸಿಗಲಿದೆ. ನಾಳೆಯಿಂದ ರಾಜ್ಯದ 19 ಜಿಲ್ಲೆಗಳಲ್ಲಿ ಹಾಫ್ ಅನ್ಲಾಕ್ ಜಾರಿಗೆ ಬರಲಿದೆ. 60 ದಿನಗಳ ಮನೆವಾಸದಿಂದ ಕಂಗೆಟ್ಟಿರೋ ಜನ್ರಿಗೆ ಅರ್ಧ ರಿಲೀಫ್ ಸಿಗಲಿದೆ.

ನಾಳೆಯಿಂದ ಕೆಲ ಜಿಲ್ಲೆಗಳಿಗೆ ಲಾಕ್ಡೌನ್ನಿಂದ ಮುಕ್ತಿ
ಕೊರೊನಾ ಕಡಿಮೆ ಮಾಡಲು ಕಳೆದೆರಡು ತಿಂಗಳಿಂದ ಜಾರಿಮಾಡಲಾಗಿರೋ ಲಾಕ್ಡೌನ್ಗೆ ನಾಳೆಯಿಂದ ಮೊದಲ ಹಂತದ ರಿಲೀಫ್ ಸಿಗಲಿದೆ. ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗಿರೋ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ 19 ಜಿಲ್ಲೆಗಳಲ್ಲಿ ಹಾಫ್ ಅನ್ಲಾಕ್ಗೆ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ರು. ಇದರನ್ವಯ ನಾಳೆ ಬೆಳಗ್ಗೆ 6 ಗಂಟೆಯಿಂದ ಅನ್ಲಾಕ್ ಜಿಲ್ಲೆಗಳಲ್ಲಿ ಹೊಸ ರೂಲ್ಸ್ ಜಾರಿಗೆ ಬರಲಿದೆ. ಖರೀದಿ ಸಮಯ ವಿಸ್ತರಣೆ, ಕೆಲ ಕ್ಷೇತ್ರಗಳಿಗೆ ಅನುಮತಿ ಸೇರಿದಂತೆ ಹಲವು ಬದಲಾವಣೆಗಳೊಂದಿಗೆ ನಾಳೆಯಿಂದ ಅನ್ಲಾಕ್ ಜಾರಿಗೆ ಬರಲಿದೆ.

 



Post a Comment

0 Comments