ತುಳುನಾಡು: ಹಿಂದಿನ ಕಾಲದಿಂದಲೂ ಕರುನಾಡಿನ ಕರಾವಳಿಯ ಒಂದು ಭಾಗವನ್ನು ಭಾಗವನ್ನು ತುಳುನಾಡು ಎಂದು ಕರೆಯಲಾಗುತ್ತದೆ. ಇಲ್ಲಿನ ಬಹುತೇಕ ಜನರು ತುಳು ಭಾಷೆ ಮಾತನಾಡುತ್ತಾರೆ.ಕೊಂಕಣಿ ಮತ್ತು ಬ್ಯಾರಿ ಭಾಷೆಗಳನ್ನಾಡುವ ಸಾಕಷ್ಟು ಜನರು ಕೂಡ ತುಳುನಾಡಿನಲ್ಲಿದ್ದಾರೆ.
ತುಳುನಾಡಿನ ಅರಸರಲ್ಲಿ ಬಹುತೇಕ ಮಂದಿ ಜೈನರು. ಇಲ್ಲಿ ಬೌದ್ದ, ಜೈನ,ವೀರಶೈವ,ಇಸ್ಲಾಂ,ಕ್ರೈಸ್ತ ಹೀಗೆ ಅನೇಕ ಮತೀಯರು ನೆಲೆಸಿದ್ದಾರೆ.ನಾಗಾರಾಧನೆ ಮತ್ತು ದೈವಾರಾಧನೆ ತುಳುನಾಡಿನ ಎರಡು ಆರಾಧನಾ ಪಂಥಗಳು.
ಇಂತಹ ಇತಿಹಾಸವಿರುವ ತುಳುನಾಡಿನ ಬಗ್ಗೆ ಅವಹೇಳನಕಾರಿ ಚರ್ಚೆಗಳು ಕೇಳಿಬರುತ್ತಿರುವ ಕಾರಣ ತುಳುವರು ಟ್ವಿಟ್ಟರ್ ಅಭಿಯಾನವನ್ನು ನಾಳೆ ಕೈಗೊಳ್ಳಲಿದ್ದಾರೆ.
ತುಳು ಟ್ವೀಟ್ ಆರ್ಮಿ ' ಪೇಜ್ ನಲ್ಲಿ ಜೂನ್ 13ರಂದು ಟ್ವೀಟ್ ಮಾಡುವ ಮೂಲಕ ತುಳುನಾಡನ್ನು ಶಾಶ್ವತವಾಗಿಸಲು ಪ್ರತೀ ಸಾರ್ವಜನಿಕರು ಕೈ ಜೋಡಿಸುವಂತೆ ಕೋರಿಕೊಳ್ಳಲಾಗಿದೆ.
#Tuluto8thschedule #tulunadstate
#iamfromtulunadu
#TuluOfficialInKA_KL
#SaveTulufirst
#StopkannadaImposition
#Tuluscript
#savetuluculture
ಎಲ್ಲರೂ ಟ್ವೀಟ್ ಮಾಡಿ ನಮ್ಮ ಸಂಸ್ಕೃತಿ ಉಳಿಸಿ
ಜೈ ತುಳುನಾಡು





0 Comments