Ticker

6/recent/ticker-posts

Header Ads Widget

Responsive Advertisement

ಅನಗತ್ಯ ಓಡಾಟ ಮಾಡುತ್ತಿರುವವರಿಗೆ ರಾಪಿಡ್ ಟೆಸ್ಟ್ - ಪುತ್ತೂರು ನ್ಯೂಸ್

 


 


ಪುತ್ತೂರು: ಲಾಕ್ ಡೌನ್ ಸಡಿಲಿಕೆಗೊಂಡಿದ್ದ ಮಧ್ಯಾಹ್ನ 2 ಗಂಟೆಯವರೆಗೆ ಓಡಾಟಕ್ಕೆ ಅವಕಾಶ ದೊರೆತಿದೆ.ಅದಾಗ್ಯೂ ಅನಂತರ ಅನಗತ್ಯವಾಗಿ ಅನೇಕರು ಓಡಾಡುತ್ತಿದ್ದು ಅಂತಹವರನ್ನು ತಡೆದು ವಿಚಾರಿಸಿ ಸ್ಥಳದಲ್ಲೇ ರಾಪಿಡ್ ಟೆಸ್ಟ್ ಮಾಡಲಾಗುತ್ತಿದೆ.

ಈ ಸಂದರ್ಭದಲ್ಲಿ ತಹಶಿಲ್ದಾರ್ ರಮೇಶ್.ಟಿ ಬಾಬು,ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ,ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್.ರೈ,ನಗರಸಭೆಯ ಅಧಿಜಾರಿಗಳಾದ ರಾಮಚಂದ್ರ,ಶ್ವೇತಾ ಹಾಗೂ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾದರು.ಮುಂದಿನ ದಿನಗಳಲ್ಲಿ ಮದ್ಯಾಹ್ನ 2 ಗಂಟೆ ಬಳಿಕ ಅನಗತ್ಯ ಓಡಾಟ ನಡೆಸುವವರನ್ನು ರಾಪಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಸೂಚನೆಯಂತೆ ಈ ಟೆಸ್ಟ್ ಮಾಡುತ್ತಿದ್ದೇವೆ. ಪುತ್ತೂರಿನಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಇದ್ದರೂ ಇನ್ನಷ್ಟು ಕಡಿಮೆಯಾಗಳು ಇದು ಸಹಕಾರಿಯಾಗಲಿದೆ. ಜೊತೆಗೆ ಅನಗತ್ಯ ಓಡಾಟ ನಡೆಸುವವರನ್ನು ನಿಯಂತ್ರಿಸಲು ಇದು ಸಹಕಾರಿ. ಕೋವಿಡ್ ಲಸಿಕೆ ಪಡೆದವರನ್ನು ಹಾಗೂ ಕೊರೋನ ನೆಗೆಟಿವ್ ವರದಿ ಇದ್ದರೆ ಅಂತವರಿಗೆ ವಿನಾಯಿತಿ ನೀಡಿದ್ದೇವೆ. ಪ್ರತಿನಿತ್ಯ ಇದೇ ಸ್ಥಳದಲ್ಲಿ ಹಾಗೂ ಇನ್ನಿತರ ಸ್ಥಳದಲ್ಲಿ ರಾಪಿಡ್ ಪರೀಕ್ಷೆ ನಡೆಸಲಿದ್ದೇವೆ – ಡಾ.ದೀಪಕ್.ರೈ ತಾಲೂಕು ಆರೋಗ್ಯಾಧಿಕಾರಿ

 



Post a Comment

0 Comments