ತುಳುನಾಡಿನ ಬಾವುಟಕ್ಕೆ ಅಪಮಾನ ಮಾಡಿ ತುಳುವರ ಕೆಂಗಣ್ಣಿಗೆ ಗುರಿಯಾಗಿದ್ದ ಸೂರ್ಯ ಎನ್.ಕೆ. ಎಂಬಾತನನ್ನು ಪೋಲಿಸರು ಇದೀಗ ಬಂಧಿಸಿದ್ದಾರೆ.
ಈತ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ತುಳುನಾಡಿನ ಬಾವುಟವನ್ನು ಚಪ್ಪಲ್ ನ ರೂಪದಲ್ಲಿ ಎಡಿಟ್ ಮಾಡಿ ಅಶ್ಲೀಲ ಬರಹಗಳ ಮೂಲಕ ಕಾಮೆಂಟ್ ಮಾಡಿದ್ದ. ಜೈ ತುಲುನಾಡ್ (ರಿ) ಸಂಘಟನೆ ಸೇರಿದಂತೆ ಹಲವು ತುಳುನಾಡಿನ ಯುವಕರು ಈತನ ವಿರುದ್ಧ ಆಕ್ರೋಶಗೊಂಡರು.
ಇಲ್ಲಿಯ ಜನರು ಆತನ ವಿರುದ್ದ ತಿರುಗಿ ಬೀಳುತ್ತಲೇ ಕ್ಷಮೆ ಕೂಡ ಕೇಳಿದ್ದ. ಆದರೆ ತುಳುವರ ಭಾವನೆಗೆ ಧಕ್ಕೆ ಉಂಟು ಮಾಡಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಕೃತಿ ಮೆರೆದ ಬಗ್ಗೆ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಮಂಗಳೂರು ಬರ್ಕೆ ಠಾಣಾ ಪೊಲೀಸರ ತಂಡ ಆರೋಪಿಯನ್ನು ಶ್ರೀರಾಂಪುರದ ಆತನ ಮನೆಯಿಂದ ವಶಪಡಿಸಿಕೊಂಡು ಮಂಗಳೂರಿಗೆ ಕರೆತಂದಿದ್ದಾರೆ.ನಂತರ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯ ವಿರುದ್ಧ 40/ 2021, ಕಲಂ 153(A) 505(2) ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಮೂಲಕ ಯಾವುದೇ ಭಾಗದ ಜನರ ಭಾವನೆಗೆ ಧಕ್ಕೆ ಉಂಟು ಮಾಡುವವರು ಶಿಕ್ಷೆಗೆ ಗುರಿ ಆಗುವುದರಲ್ಲಿ ಅಚ್ಚರಿಯಿಲ್ಲ.





0 Comments