Ticker

6/recent/ticker-posts

Header Ads Widget

Responsive Advertisement

ಬೆಟ್ಟಂಪಾಡಿ: ಸ.ಪ್ರ.ದ.ಕಾಲೇಜು ಬೆಟ್ಟಂಪಾಡಿ ಯಲ್ಲಿ ಐ.ಸಿ. ಟಿ ಆಧಾರಿತ ಸ್ಮಾರ್ಟ್ ಕ್ಲಾಸ್ ರೂಮ್ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣಾ ಕಾರ್ಯಕ್ರಮ - ಪುತ್ತೂರು ನ್ಯೂಸ್

 


 



ಬೆಟ್ಟಂಪಾಡಿ: ಸ.ಪ್ರ.ದ.ಕಾಲೇಜು ಬೆಟ್ಟಂಪಾಡಿ ಯಲ್ಲಿ ಐ.ಸಿ. ಟಿ ಆಧಾರಿತ ಸ್ಮಾರ್ಟ್ ಕ್ಲಾಸ್ ರೂಮ್ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಪುತ್ತೂರಿನ ಜನಪ್ರಿಯ ಶಾಸಕರಾದ ಶ್ರೀ ಸಂಜೀವ ಮಠದೂರು ಅವರು ಉದ್ಘಾಟಿಸಿ ವಿಧ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವಿಚಾರಗಳನ್ನು ನೀಡಲು ಸರಕಾರ ಪೂರ್ಣ ಪ್ರಯತ್ನ ಮಾಡುತ್ತಿದೆ.ಕಲಿಕಾ ದೃಷ್ಟಿಯಿಂದ ಇದೀಗ ಟ್ಯಾಬ್ ಪಿಸಿ ವಿತರಣೆ ಮಾಡಿದೆ ಎಂದರು.

ಇದೇ ಸಂದರ್ಭದಲ್ಲಿ  ಕಾಲೇಜಿನ ವಾರ್ಷಿಕ ಸಂಚಿಕೆಯನ್ನು ಮಾನ್ಯ ಶಾಸಕರು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಡಾ. ಜಯಕರ ಭಂಡಾರಿ ,ವಿಶೇಷ ಅಧಿಕಾರಿಗಳು ,ಜಂಟಿ ನಿರ್ದೇಶಕರ ಕಚೇರಿ ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ ವಹಿಸಿದರು.
ಈ ಸಂದರ್ಭದಲ್ಲಿ 
ರಂಗನಾಥ್ ರೈ ಗುತ್ತು ಅಭಿವೃದ್ದಿ ಸಮಿತಿ ಉಪಾಧ್ಯಕ್ಷರು, ಸಾಜ ರಾಧಾಕೃಷ್ಣ ಆಳ್ವ,ವೆಂಕಟ್ರಮಣ ಬೋರ್ಕರ್,ವೆಂಕಟರಮಣ ಭಟ್ ಮಂಜುಳಗಿರಿ,ಜಗ್ಗನಾಥ್ ರೈ ಕೊಮ್ಮಂಡ,ಆರ್ ಸಿ ನಾರಾಯಣ,ಪ್ರಕಾಶ್ ರೈ ಬೈಲಾಡಿ ಹಾಗೂ ಇತರರು ಉಪಸ್ಥಿತರಿದ್ದರು.
ಅತಿಥಿಗಳನ್ನು
ದಾಮೋದರ ಕಣಜಾಳು ಸ್ವಾಗತಿಸಿದರು ,ಹರಿಪ್ರಸಾದ್ ಎಸ್  ಕಾರ್ಯಕ್ರಮ ನಿರೂಪಣೆ  ಮಾಡಿದರು, ರಾಮ ಕೆ ಅವರು ವಂದಿಸಿದರು.

 



Post a Comment

0 Comments