Ticker

6/recent/ticker-posts

Header Ads Widget

Responsive Advertisement

ರಾಜ್ಯದ,ದ.ಕ ಜಿಲ್ಲೆಯ ಕೋರೋನ ಅಂಕಿಅಂಶ - ಪುತ್ತೂರು ನ್ಯೂಸ್

 


 


ಕರ್ನಾಟಕದಲ್ಲಿ ಒಂದೇ ದಿನ 10,959 ಮಂದಿಗೆ ಕೊರೊನಾ ಸೋಂಕು, 192 ಸಾವು.
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ ಮತ್ತೆ 10 ಸಾವಿರದ ಗಡಿ ದಾಟಿದೆ. ನಿನ್ನೆಯಷ್ಟೇ ಸೋಂಕಿತರ ಒಂದು ದಿನದ ಸಂಖ್ಯೆ 10 ಸಾವಿರಕ್ಕಿಂತಲೂ ಕಡಿಮೆ ವರದಿಯಾಗಿತ್ತು. ಬುಧವಾರ (ಜೂನ್ 9) ಒಂದೇ ದಿನ ಒಟ್ಟು 10,959 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 192 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ 2,395 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 50 ಜನರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 27,28,248ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 24,80,411 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 32,291 ಜನರು ಮೃತಪಟ್ಟಿದ್ದಾರೆ. 2,15,525 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ 594 ಪ್ರಕರಣಗಳು ಪತ್ತೆಯಾಗಿವೆ ಹಾಗೂ 3 ಮಂದಿ ಸಾವನ್ನಪ್ಪಿದ್ದರು.

 



Post a Comment

0 Comments