Ticker

6/recent/ticker-posts

Header Ads Widget

Responsive Advertisement

ಪಡುವನ್ನೂರು ಗ್ರಾಮದ ಅಂಬಟೆ ಮೂಲೆಯ ನಿವಾಸಿ ರಾಮ ನಾಯ್ಕ ಅವರಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಹಿಂಜಾವೇ ಕಾರ್ಯಕರ್ತರು - ಪುತ್ತೂರು ನ್ಯೂಸ್

 


 


ಪುತ್ತೂರು : ಪಡುವನ್ನೂರು ಗ್ರಾಮದ ಅಂಬಟೆ ಮೂಲೆಯ ನಿವಾಸಿ ರಾಮ ನಾಯ್ಕ ಎಂಬುವವರು  ಬಿದ್ದು ಮೂಲೆ ಮುರಿತಕ್ಕೊಳಗಾಗಿದ್ದು, ಅವರನ್ನು ಹಿಂಜಾವೇ ಕಾರ್ಯಕರ್ತರು ಹಿಂದೂ ಜಾಗರಣ ವೇದಿಕೆಯ ಆಂಬ್ಯುಲೆನ್ಸ್ ಮೂಲಕ  ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ತಂದು ಬಿಟ್ಟಿದ್ದಾರೆ. ಈ ಮೂಲಕ ಕಾರ್ಯಕರ್ತರು  ಮಾನವೀಯತೆ ಮೆರೆದಿದ್ದಾರೆ.

ರಾಮ ನಾಯ್ಕ ಅವರ ಪತ್ನಿ ಸಹ 4 ವರ್ಷಗಳಿಂದ ಅನಾರೋಗ್ಯದಿಂದಾಗಿ ಮಲಗಿದ ಪರಿಸ್ಥಿತಿಯಲ್ಲಿ ಇದ್ದು, ಅವರ ಮನೆಗೆ ಸರಿಯಾದ ರಸ್ತೆಯ ವ್ಯವಸ್ಥೆಯು ಇಲ್ಲದೇ ಸಂಪರ್ಕ ರಸ್ತೆಯಿಂದ 500ಮೀಟರ್ ಕಿರಿದಾದ ದಾರಿಯಲ್ಲಿ ಹೊತ್ತುಕೊಂಡೇ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸ್ಥಿತಿಯನ್ನು ಜನಪ್ರತಿನಿಧಿಗಳು ಸರಿ ಪಡಿಸಬೇಕಾಗಿದೆ.

 



Post a Comment

0 Comments