ಪುತ್ತೂರು: ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯದಲ್ಲಿ ಲಾಕ್ ಸಡಿಲಿಕೆ ಗೊಂಡರು ಜಿಲ್ಲೆಯಲ್ಲಿ ಮುಂದುವರೆದಿದೆ.
ಲಾಕ್’ಡೌನ್ ಆದ ನಂತರ ತತ್ತರಿಸಿ ಹೋಗಿದ್ದ ಆಟೋ ಚಾಲಕರಿಗೆ ಚಿಕ್ಕ ಸಾಂತ್ವಾನ ಕಾರ್ಯ ಮಾಡಲು ಬಪ್ಪಳಿಗೆಯ ಅಮರನಾಥ್ ಗೌಡ ಮುಂದಾಗಿದ್ದಾರೆ. ಎಐಸಿಸಿ ನಿಕಟಪೂರ್ವ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ಪ್ರಯುಕ್ತ , ಕೊರೋನ ಸಂಕಷ್ಟದಲ್ಲಿರುವ ಶ್ರಮಜೀವಿಗಳಾದ ರಿಕ್ಷಾ ಚಾಲಕರಿಗೆ ಉಚಿತ ಪೆಟ್ರೋಲ್ ನೀಡುತಿದ್ದಾರೆ.
ಇಂದು(19/06/2021) ಬೆಳಗ್ಗೆ 8:00 ರಿಂದ 9:30ರವರೆಗೆ ಪುತ್ತೂರಿನ ಮಂಜಲ್ಪಡುಪು ಪೆಟ್ರೋಲ್ ಬಂಕ್ ಬಳಿ ರಿಕ್ಷಾ ಚಾಲಕರಿಗೆ 1ಲೀಟರ್ ಪೆಟ್ರೋಲ್ ಉಚಿತವಾಗಿ ನೀಡುತ್ತಿದ್ದಾರೆ
ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆ ಆಗುತ್ತಿರುವ ಹಿನ್ನಲೆ ಆಟೋ ಚಾಲಕರು ಮೊದಲೇ ಸಂಕಷ್ಟದಲ್ಲಿ ಇರುವಾಗ ಉಚಿತ ಪೆಟ್ರೋಲ್ ನೀಡುತ್ತಿರುವ ಅಮರನಾಥ್ ಗೌಡ ಅವರು ಎಲ್ಲರಿಗೂ ಮಾದರಿ.





0 Comments