ದಿನಾಂಕ 11/07/2021ನೇ ಆದಿತ್ಯವಾರದಂದು ಆರ್ಯಾಪು ಗ್ರಾಮದ ಮೇಲ್ಮಜಲು ಕುಂಞಣ್ಣ ನಾಯ್ಕರ ಒಂದು ಎಕರೆ ಗದ್ದೆಯಲ್ಲಿ,ಮರಾಟಿ ಯುವ ವೇದಿಕೆ ಕೊಂಬೆಟ್ಟು ಪುತ್ತೂರು ಇದರ ವತಿಯಿಂದ,
ಎರಡನೇ ವರ್ಷದ ನೇಜಿ ನಾಟಿ ಮಾಡುವ ಕಾರ್ಯಕ್ರಮ ನಡೆಯಿತು.
ಕಂಡದ ಮರ್ಗಿಲ್'ಡ್ ಒಂಜಿ ದಿನ ಯುವ ವೇದಿಕೆದ ಕಂಡದ ನೆಲೆ ಯುವ ವೇದಿಕೆದ ಬುಳೆ ಎಂಬ ವಿಶೇಷ ಕಾರ್ಯಕ್ರಮ ಯುವ ವೇದಿಕೆಯ ಸದಸ್ಯರ ಜೊತೆ ಸ್ಥಳೀಯರ ಸಹಕಾರದೊಂದಿಗೆ ಅತ್ಯುತ್ತಮವಾಗಿ ಮೂಡಿಬಂದಿದೆ.
ಈ ಸುಂದರ ಕಾರ್ಯಕ್ರಮದಲ್ಲಿ *ಯುವ ವೇದಿಕೆಯ ಗೌರವಾಧ್ಯಕ್ಷರಾದ ಶ್ರೀ ಗಿರೀಶ್ ಸೊರಕೆ, ಅಧ್ಯಕ್ಷರಾದ ಗೋಪಾಲ ಪಡುಮಲೆ, ಕಾರ್ಯದರ್ಶಿ ಗಂಗಾಧರ ಕೌಡಿಚ್ಚಾರು ,ಖಂಜಾಜಿ ವಸಂತ ಆರ್ಯಾಪು ಹಾಗೂ ಪದಾಧಿಕಾರಿಗಳಾದ ಅಶೋಕ್ ಸೊರಕೆ, ಸಂದೀಪ್ ಆರ್ಯಾಪು, ಕಾರ್ತಿಕ್ ಆರ್ಯಾಪು, ಶಾರದ ಕೌಡಿಚ್ಚಾರು, ವೆಂಕಪ್ಪ ಬರೆಪ್ಪಾಡಿ, ನವೀನ ಬರೆಪ್ಪಾಡಿ, ವಿಜಯ ಆರ್ಲಪದವು,ಲಿಖಿತ್.ವಿಜೇಶ್.ಸಚಿನ್. ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ಸತತ ಎರಡು ವರ್ಷಗಳಿಂದ ಯುವ ಪೀಳಿಗೆಯನ್ನು ಕೃಷಿಯತ್ತ ಒಲವು ತೋರಿಸುವ ಮಹತ್ತರ ಕಾರ್ಯ ಯುವ ವೇದಿಕೆಯಿಂದ ನಡೆದು ಬಂದಿರುತ್ತದೆ.





0 Comments