ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಗಾಯಕ ನೆಲೋಗಿ ಸುನೀಲ್ ಗುಜಗುಂಡರವರ ಹುಟ್ಟುಹಬ್ಬವನ್ನು ನಿನ್ನೆ ಕಲಬುರಗಿಯ ವೃದ್ದಾಶ್ರಮದಲ್ಲಿ ಆಚರಿಸಲಾಯಿತು.
ಪ್ರತಿ ವರ್ಷವು ಹುಟ್ಟುಹಬ್ಬವನ್ನು ಮೋಜು ಮಸ್ತಿಯೊಂದಿಗೆ ಆಚರಿಸದೆ ಬಹಳ ವಿಶೇಷ ರೀತಿಯಲ್ಲಿ ಆಚರೊಸುತ್ತಿದ್ದು ಈ ವರ್ಷವು ಅವರು ಕಲಬುರಗಿ ವೃದ್ದಾಶ್ರಮದ್ಳಿರುವ ಹಿರಿಯರ ಅಮೃತ್ ಹಸ್ತದಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು.
ಜನುಮ ದಿನದ ಪ್ರಯುಕ್ತ ಅವರು ವೃದ್ಧಾಶ್ರಮದ ಹಿರಿಯರಿಗೆ ಉಪಹಾರದ ವ್ಯವಸ್ಥೆ , ಕೆಲವು ದಿನಕ್ಕೆ ಬೇಕಾಗುವಷ್ಟು ದಿನಸಿ ಪದಾರ್ಥ ಹಾಗೂ
ಧನಸಹಾಯ ಮಾಡುವ ಮೂಲಕ ಮತ್ತು ಸಮಾಜಸೇವೆ ಮಾಡುತ್ತಿರುವ ಕರೋನಾವಾರಿಯರ್ಸ್ ಗಳಾದ ನಾಲ್ಕುಚಕ್ರ ತಂಡದ ಸದಸ್ಯರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಾಲ್ಕು ಚಕ್ರ ತಂಡದ ಸದಸ್ಯರು ಆತ್ಮೀಯ ಗೆಳೆಯರ ಬಳಗ ಸ್ಥಳೀಯ ಸ್ನೇಹ ಬಳಗ ದ ಆತ್ಮೀಯರು ಉಪಸ್ತಿತರಿದ್ದರು ..
ಸುನೀಲ್ ರವರು ಉತ್ತಮ ಯುವ ಗಾಯಕರಾಗಿದ್ದು ನಾಡಿನ ಜನತೆಗಡ ಝೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಮೂಲಕ ನಾಡಿನ ಜನತೆಯ ಪ್ರೀತಿ ಗಳಿಸಿದ್ದಾರೆ. ಝೀ ಕನ್ನಡ ವಾಹಿನಿಯ ತಂಡದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಇವರು ವಾಹಿನಿಯಲ್ಲಿ ಪ್ರಸಾರವಾಗುವ ಕೆಲವೊಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.





0 Comments