Ticker

6/recent/ticker-posts

Header Ads Widget

Responsive Advertisement

ರೋಟರಿ ಕ್ಲಬ್ ಸುಳ್ಯ ವತಿಯಿಂದ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ - ಪುತ್ತೂರು ನ್ಯೂಸ್

 


 


ರೋಟರಿ ಕ್ಲಬ್ ಸುಳ್ಯ ವತಿಯಿಂದ  ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ 

ಹುಚ್ಚು ನಾಯಿ ರೋಗ ‌ನಿರೋಧಕ ಲಸಿಕಾ ಕಾರ್ಯಕ್ರಮ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಹಾಗೂ ರೋಟರಿ ಕ್ಲಬ್ ಬೆಳ್ಳಾರೆ ಇದರ ಜಂಟಿ ಆಶ್ರಯದಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮವೂ ಕೊಡಿಯಾಲ ಗ್ರಾಮದ ಕಲ್ಪನೆಯಲ್ಲಿ ನಡೆಯಿತು‌. 
ಗ್ರಾಮಸ್ಥರು ಸಾಕು ನಾಯಿಗಳನ್ನು  ತಂದು ಈ ಲಸಿಕಾ ಕಾರ್ಯಕ್ರಮದಲ್ಲಿ ನಾಯಿಗಳಿಗೆ ಚುಚ್ಚು ಮದ್ದಿನ ಮೂಲಕ ಲಸಿಕೆಯನ್ನು ಹಾಕಿಸಿದರು. 

ಈ ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿಗಳಾದ ಡಾ, ಸೂರ್ಯ ನಾರಾಯಣ  ಸಹಾಯಕಿ ಶ್ರೀಮತಿ ಯಶೋದ, ಬೆಳ್ಳಾರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು, ಹಾಗೂ ಬೆಳ್ಳಾರೆ ಸಿಎ ಬ್ಯಾಂಕ್ ನ ಮಾಜಿ ಅಧ್ಯಕ್ಷರು ಮತ್ತು ಕೊಡಿಯಾಲ ಗ್ರಾಮ ಪಂಚಾಯತ್ ಸದಸ್ಯರಾದ ಕರುಣಕರ ಆಳ್ವ, ರೋಟರಿ ಕ್ಲಬ್ ನ ಅಧ್ಯಕ್ಷರಾದ ಪದ್ಮನಾಭ ಬೀಡು, ರೋಟರಿಯನ್, ಅರವೀಂದ್ರ ಗೌಡ, ವಿನಯಕ್, ಪ್ರಮೋದ್, ಇನ್ನು ಹಲವಾರು ಜನ ಲಸಿಕಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 



Post a Comment

0 Comments