ಕೇರಳದ ಹೊಸಂಗಡಿಯ ರಾಜಧಾನಿ ಜುವೆಲ್ಲರಿಯ ದರೋಡೆ ಮಾಡಿ ಬರುತ್ತಿದ್ದ ವೇಳೆ ಆರೋಪಿಗಳ ಕಾರನ್ನು ಅಡ್ಡಗಟ್ಟಿದ ಉಳ್ಳಾಲ ಪೊಲೀಸರು, 7.75 ಕೆಜಿ ಬೆಳ್ಳಿ ಸೇರಿದಂತೆ ₹14,35,500 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇಲೆ ಸೋಮವಾರ ಬೆಳಿಗ್ಗೆ ಉಳ್ಳಾಲ ಸಬ್ ಇನ್‌ಸ್ಪೆಕ್ಟರ್ ಪ್ರದೀಪ್ ಟಿ.ಆರ್. ಹಾಗೂ ಸಿಬ್ಬಂದಿ ಕೆ.ಸಿ. ರೋಡ್ ಜಂಕ್ಷನ್ ಬಳಿ, ಮಂಜೇಶ್ವರದಿಂದ ಬರುತ್ತಿದ್ದ ಕಾರನ್ನು ತಡೆದು ಪರಿಶೀಲನೆ ನಡೆಸಲು ಯತ್ನಿಸಿದರು. ಆಗ ಕಾರಿನಲ್ಲಿದ್ದವರು ಆಯುಧದಿಂದ ಸಬ್ ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿ, ಯತ್ನಿಸಿ ಪರಾರಿಯಾಗಿದ್ದಾರೆ.ನ ತರ ಕಾರನ್ನು ತಪಾಸಣೆ ಮಾಡಿದಾಗ, 7.75 ಕೆಜಿ ಬೆಳ್ಳಿ, ₹1.90 ಲಕ್ಷ ನಗದು, 30 ಹರಳುಗಳು, ವಿವಿಧ ಕಂಪನಿಯ ವಾಚ್‌ಗಳು, ಡಿವಿಆರ್, ಕಬ್ಬಿಣದ ಕತ್ತರಿ, ಮೆಣಸಿನ ಹುಡಿ ಪ್ಯಾಕೆಟ್, ಸ್ಪ್ರೇ ಪೈಂಟ್ ಡಬ್ಬಿ, ಎಲೆಕ್ಟ್ರಾನಿಕ ಮಾಪಕ, ಸೈರನ್ ಮೆಶಿನ್, ಗ್ಯಾಸ್ ಸಿಲಿಂಡರ್, ಕಬ್ಬಿಣದ ಕಟ್ಟರ್, ಕಬ್ಬಿಣದ ರಾಡ್‌ಗಳು, ಮಚ್ಚು ಹಾಗೂ ಇನ್ನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಫರಂಗಿಪೇಟೆಯ ಮೊಹಮ್ಮದ್ ಗೌಸ್, ಸುರತ್ಕಲ್‌ನ ಇಮ್ರಾನ್ ಹಾಗೂ ಇತರರು ಕಾರಿನಲ್ಲಿದ್ದು, ಆರೋಪಿಗಳು ಹೊಸಂಗಡಿಯ ರಾಜಧಾನಿ ಜುವೆಲ್ಲರಿಯ ವಾಚ್‌ಮೆನ್ ಮೇಲೆ ಹಲ್ಲೆ ಮಾಡಿ, ದರೋಡೆ ಮಾಡಿದ್ದರು.






0 Comments