Ticker

6/recent/ticker-posts

Header Ads Widget

Responsive Advertisement

ಹಿಂಜಾವೇ ಪುತ್ತೂರು ವತಿಯಿಂದ ಕೋರೋನ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ಮತ್ತು ಸಹಭೋಜನ ಕಾರ್ಯಕ್ರಮ - ಪುತ್ತೂರು ನ್ಯೂಸ್

 


 


ಹಿಂದು ಜಾಗರಣ ವೇದಿಕೆ ಪುತ್ತೂರು ವತಿಯಿಂದ ಕೋರೋಣ ಮಹಾಮಾರಿಯಿಂದ ತತ್ತರಿಸಿದ ಪುತ್ತೂರು ತಾಲೂಕಿನಾಧ್ಯಂತ ಕೋರೋಣ ವಾರಿಯರ್ಸ್ ಗಲಾಗಿ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ಮತ್ತು ಸಹಭೋಜನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ತಾಲೂಕಿನಾದ್ಯಂತ ದಿನದ ಇಪ್ಪತ್ನಾಲ್ಕು ಗಂಟೆಯೂ ರಾತ್ರಿ ಹಗಲು ಎನ್ನದೆ ತನ್ನ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ ತಿಂಗಳು ಗಟ್ಟಲೆ ಮನೆ ಕುಟುಂಬ ಬಿಟ್ಟು ಸೇವಾ ಭಾರತಿ ಜೊತೆ ಸೇರಿಕೊಂಡು ಕೆಲಸಮಾಡಿದ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಿದರು
ಹಿಂದು ಜಾಗರಣ ವೇದಿಕೆ ಯ ಜಿಲ್ಲಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ ಕೃತಜ್ಞತಾ ಭಾಷಣ ಮಾಡಿದರು.
ಹಿಂದು ಜಾಗರಣ ವೇದಿಕೆ ತಾಲೂಕ್ ಅಧ್ಯಕ್ಷ ಅಶೋಕ್ ತ್ಯಾಗರಾಜ ನಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು...ನಿಕಟ ಪೂರ್ವ ಅಧ್ಯಕ್ಷ ಸಚಿನ್ ಪಾಪೇಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಜಿಲ್ಲಾ ಮಾತೃ ಸುರಕ್ಷಾ ಪ್ರಮುಖ್ ರಾಜೇಶ್ ಪಂಚೋಡಿ  ಕೋರೋಣ ಲಾಕ್ ಡೌನ್ ಸಂಧರ್ಭದಲ್ಲಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಮಾಡಿದ ಸೇವಾ ಕಾರ್ಯದ ಬಗ್ಗೆ ವರದಿ ಸಲ್ಲಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಲಾಕ್ಡೌನ್ ಸಂಧರ್ಭ ಸೇವಾ ಭಾರತಿ ಜೊತೆ ಸೇರಿಕೊಂಡು 18 ಕೋರೋಣ ಸೋಂಕಿತ ವ್ಯಕ್ತಿಗಳ ಶವಸಂಸ್ಕಾರ ಹಿಂದು ಸಂಪ್ರದಾಯದಂತೆ ನೆರವೇರಿಸಲಾಗಿದೆ..ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಹಿಂದು ಜಾಗರಣ ವೇದಿಕೆ ಆಂಬುಲೆನ್ಸ್,ಸೇವಾ ರಥ ಆಂಬುಲೆನ್ಸ್,ಸಂಜೀವಿನಿ ಆಂಬುಲೆನ್ಸ್,ಹಾಗೂ ಎರಡು ತುರ್ತು ವಾಹನ ಗಳಲ್ಲಿ ಒಟ್ಟು 250ಟ್ರಿಪ್ ನಲ್ಲಿ 550 ಕ್ಕೂ ಅಧಿಕ ಕೋರೋಣ ಸೋಂಕಿತ ರನ್ನು ಸಾಗಾಟ ಮಾಡಿದ್ದಾರೆ....ಹಿಂದು ಜಾಗರಣ ವೇದಿಕೆ ರಕ್ತ ಸಹಾಯವಾಣಿ ವತಿಯಿಂದ ಈಗಾಗಲೇ 896 ಯುನಿಟ್ ರಕ್ತ ದಾನ ಮಾಡಲಾಗಿದೆ....ಅಶಕ್ತ ಕುಟುಂಬಗಳಿಗೆ 90ಅಗತ್ಯ ಆಹಾರದ ಕಿಟ್ ವಿತರಣೆ ಮಾಡಲಾಗಿದೆ....142 ಮನೆಗಳಿಗೆ ಅಗತ್ಯ ಔಷಧಿಗಳನ್ನು ಬೇರೆ ಬೇರೆ ಕಡೆಗಳಿಂದ ಮುಟ್ಟಿ ಸಲಾಗಿದೆ ಎಂದು ವರದಿ ಸಲ್ಲಿಸಿದರು..ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಈಶ್ವರಮಂಗಲ ಮಂಡಲ ಸಹ ಕಾರ್ಯವಾಹ ಹರೀಶ್ ಬಾಬು ರವರು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಕೆಲಸ ಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
      ಕಾರ್ಯಕ್ರಮದ ನಂತರ ಎಲ್ಲಾ ಕಾರ್ಯಕರ್ತರಿಗೆ ಸಹಭೋಜನ ವ್ಯವಸ್ಥೆ ಮಾಡಲಾಯಿತು...ಹಿಂದು ಜಾಗರಣ ವೇದಿಕೆ ತಾಲೂಕು ಸಂಪರ್ಕ ಪ್ರಮುಖ್ ದಿನೇಶ್ ಪಂಜಿಗ ಸ್ವಾಗತಿಸಿ. ಈಶ್ವರಮಂಗಲ ಘಟಕದ ಸಂಪರ್ಕ ಪ್ರಮುಖ್ ಪ್ರವಿಶ್ ಬಂಟುಕಲ್ಲು ವಂದಿಸಿದರು

 



Post a Comment

0 Comments