Ticker

6/recent/ticker-posts

Header Ads Widget

Responsive Advertisement

ಮಾಯಿದೆ ದೇವುಸ್ ಚರ್ಚ್ ನ ನಿರ್ಗಮಿತ ಸಹಾಯಕ ಧರ್ಮ ಗುರುಗಳಾದ ವಂದನೀಯ ಫಾದರ್ ಲ್ಯಾರಿ ಪಿಂಟೋ ರವರಿಗೆ ಬೀಳ್ಕೊಡುಗೆ ಸಮಾರಂಭ - ಪುತ್ತೂರು ನ್ಯೂಸ್

 


 


ಪುತ್ತೂರು:  ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ಚರ್ಚ್ ಗಳಲ್ಲಿ ಒಂದಾಗಿರುವ ಪುತ್ತೂರಿನ ಮಾಯಿದೆ ದೇವುಸ್ ಚರ್ಚ್ ನ ನಿರ್ಗಮಿತ ಸಹಾಯಕ ಧರ್ಮ ಗುರುಗಳಾದ ವಂದನೀಯ ಫಾದರ್ ಲ್ಯಾರಿ ಪಿಂಟೋ ರವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಚರ್ಚ್ ನ ಯುವ ಸಂಘಟನೆಯಾದ ಭಾರತೀಯ ಕ್ಯಾಥೋಲಿಕ್ ಯುವ ಸಂಚಲನದ ವತಿಯಿಂದ ನಡೆಸಲಾಯಿತು. ಈ ಸಂದರ್ಭದಲ್ಲಿ ನೂತನ ಸಹಾಯಕ ಧರ್ಮ ಗುರುಗಳಾದ ವಂದನೀಯ ಫಾದರ್ ಕೇವಿನ್ ಲಾರೆನ್ಸ್ ಡಿಸೋಜಾ ರವರನ್ನು ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಗಮಿತ ಫಾದರ್ ಲ್ಯಾರಿ ಪಿಂಟೋ ರವರು, "ಜೀವನ ಒಂದು ಪಯಣವಾಗಿದೆ, ಈ ಪಯಣದಲ್ಲಿ ನಾವು ತುಂಬಾ ಜನರನ್ನು ಭೇಟಿ ಮಾಡುತ್ತೇವೆ. ನಾವು ಫಾದರ್ ನವರು ನಮ್ಮ ಈ ಪಯಣದಲ್ಲಿ ಯಾವುದೇ ಚರ್ಚ್ ನಲ್ಲಿ ಜೀವಿತಾವದಿ ವರೆಗೆ ನಿಲ್ಲುವ ಹಾಗಿಲ್ಲ. ನಿವೃತ್ತಿ ಯಾಗುವ ವರೆಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ನಮ್ಮ ಪಯಣ ಸಾಗುತ್ತಲೇ ಇರುತ್ತದೆ.
 ಪುತ್ತೂರಿನ ಜನತೆಯಿಂದ ನನಗೆ ತುಂಬಾ ಪ್ರೀತಿ ಸಿಕ್ಕಿದೆ, ಎಲ್ಲರೂ ತುಂಬಾ ಅನ್ಯೋನ್ಯತೆಯಿಂದ ಇದ್ದರು. ನೀವೆಲ್ಲರೂ ನನಗೆ ನೀಡಿದ ಪ್ರೀತಿಗೆ ನಾನು ಸದಾ ಋಣಿಯಾಗಿರುತ್ತೇನೆ. ಹಾಗೆಯೇ ಯುವಜನರು ಪ್ರತಿ ಕಾರ್ಯದಲ್ಲೂ ಜೊತೆಯಲ್ಲಿದ್ದು ನನಗೆ ಸಹಕಾರ ನೀಡಿದ್ದೀರಾ, ನಿಮಗೆ ತುಂಬಾ ಧನ್ಯವಾದಗಳು" ಎಂದರು.

ಕಾರ್ಯಕ್ರಮದಲ್ಲಿ ಚರ್ಚ್ ನ ಪ್ರಧಾನ ಧರ್ಮ ಗುರುಗಳಾದ ಅತಿ ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನ್ಹಸ್, 
ನೂತನ ಸಹಾಯಕ ಧರ್ಮ ಗುರುಗಳಾದ ಫಾದರ್ ಕೇವಿನ್ ಲಾರೆನ್ಸ್ ಡಿಸೋಜಾ ರವರು ಉಪಸ್ಥಿತರಿದ್ದರು
ಭಾರತೀಯ ಕ್ಯಾಥೋಲಿಕ್ ಯುವ ಸಂಚಲನದ ಪುತ್ತೂರು ಚರ್ಚ್ ನ ಅಧ್ಯಕ್ಷ ಮಹೀಮ್ ಮೊಂತೆರೋ, ಕಾರ್ಯದರ್ಶಿ ಲಿಯಾನ್ನ ರೋಡ್ರಿಗಸ್ ಹಾಗೂ ಯುವ ಸಂಚಲನದ ಸದಸ್ಯರು ಉಪಸ್ಥಿತರಿದ್ದರು.

ವರದಿ: ಹರೀಶ್ ಪುತ್ತೂರು

 



Post a Comment

0 Comments