Ticker

6/recent/ticker-posts

Header Ads Widget

Responsive Advertisement

ಪುತ್ತೂರಿನಲ್ಲಿ ಮೋಹಿ ಡಿಸೈನರ್ ಬೌಟಿಕ್ ಶುಭಾರಂಭ | Inaguration - ಪುತ್ತೂರು ನ್ಯೂಸ್

 


 


ಪುತ್ತೂರು: ಪುತ್ತೂರಿನ ಗಾಂಧಿಕಟ್ಟೆಯ ಬಳಿ ಇರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹಿಂದೂಸ್ಥಾನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಮದುಮಗಳ, ಮಹಿಳೆಯರ ಮತ್ತು ಮಕ್ಕಳ ವೈವಿಧ್ಯಮಯ  ಆಕರ್ಷಕ ಶೈಲಿಯ, ಡಿಸೈನರ್ ಉಡುಪುಗಳ ಸಂಗಮ ‘ಮೋಹಿ ಡಿಸೈನರ್ ಬೌಟಿಕ್  ಇಂದು ಶುಭಾರಂಭಗೊಂಡಿತು. 

ಮಳಿಗೆಯ ಉದ್ಘಾಟನೆಯನ್ನು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಸಂತ ಕೆದಿಲಾಯ ರವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಮಾಯಿದೆ ದೇವುಸ್ ಚರ್ಚ್‌ನ ಧರ್ಮಗುರು ರೆವ್ ಫಾ  ಲಾರೆನ್ಸ್ ಮಸ್ಕರೇನಸ್ ರಿಬ್ಬನ್ ಕತ್ತರಿಸಿ  ಉದ್ಘಾಟಿಸಿದರು.

ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುತ್ತೂರಿನ ಮಾಜಿ ಶಾಸಕಿ  ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ಹಿಂದೂಸ್ಥಾನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಮ್ಹಾಲಕ ಡಾ|ಮಹಮ್ಮದ್ ಇಬ್ರಾಹಿಂ ಪಾವೂರು, ನ್ಯಾಯವಾದಿಗಳಾದ ಮಹೇಶ್ ಕಜೆ, ದೀಪಿಕಾ, ಹರಿಣಾಕ್ಷಿ ಜೆ.ಶೆಟ್ಟಿ, ಸಾಹಿರಾ ಝುಬೇರ್, ಆರ್ಯಾಪು ಗ್ರಾ.ಪಂ ಸದಸ್ಯ ಹರೀಶ್ ನಾಯಕ್, ಕೋಡಿಂಬಾಡಿ ಗ್ರಾ.ಪಂ ಸದಸ್ಯ ಜಯಪ್ರಕಾಶ್ ಬದಿನಾರು, ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಕಟ್ಟಡದ ವ್ಯವ್ಥಾಪಕ ಮುದಸ್ಸಿರ್, ಎಪಿಎಂಸಿ ಸದಸ್ಯ ವಿ.ಎಚ್ ಅಬ್ದುಲ್ ಶಕೂರ್, ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಸದಸ್ಯ ನವೀನ್‌ಚಂದ್ರ ನಾಯ್ಕ್ , ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜ, ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮ್ಹಾಲಕ ಸಂಘದ ಸಿಲ್ವೆಸ್ಟರ್ ಡಿ ಸೋಜ, ಇಸ್ಮಾಯಿಲ್ ಬೊಳುವಾರು ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.
ಸಂಸ್ಥೆಯ ಪಾಲುದಾರರಾದ ಶ್ರಾವ್ಯ ಶೆಟ್ಟಿ, ವಿನೋದ್ ಶೆಟ್ಟಿ, ಶಿಲ್ಪಾ ಗಾಣಿಗ ಹಾಗೂ ನವೀನ್ ಕುಮಾರ್ ಈ ಸಂದರ್ಭ  ಉಪಸ್ಥಿತರಿದ್ದರು.

ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ಡಿಸೈನ್‌ಗಳಲ್ಲಿ ಕ್ಲಪ್ತ ಸಮಯದಲ್ಲಿ ಹೊಲಿದು ಕೊಡಲಾಗುವುದು. ನಮ್ಮಲ್ಲಿ ಕಸ್ಟಮೈಸ್‌ಡ್ ಬ್ರೈಡಲ್ ಗೌನ್ಸ್, ಲೆಗ್ಗಿನ್ಸ್, ಮಹಿಳೆಯರ ಮತ್ತು ಮಕ್ಕಳ ಡಿಸೈನ್ ಉಡುಗೆಗಳು, ಮೆನ್ಸ್ ರೆಂಟಲ್ ಕಲೆಕ್ಷನ್ಸ್, ಸೆಮಿ ಸ್ಟಿಚ್ಡ್ ಲೆಗ್ಗಿನ್ಸ್, ಫ್ಯಾಬ್ರಿಕ್ ಸ್ಪಾಟ್, ಡಿಸೈನರ್ ಸ್ಟಿಚ್ಚಿಂಗ್, ಜ್ಯುವೆಲ್ಲರಿಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

 



Post a Comment

0 Comments