ಪುತ್ತೂರಿನಲ್ಲಿ ಆಡಳಿತ ಮಂಡಳಿಯ ವಿನೂತನ ಪ್ರಯತ್ನಕ್ಕೆ ಪೂರಕ ಸ್ಪಂದನೆ ನೀಡಿದ ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ರಾಜಕೀಯ, ಪಕ್ಷ, ಭೇದ ಮರೆತು ಸಭೆಯಲ್ಲಿ ಭಾಗವಹಿಸಿದ್ದರು. ಅಭಿವೃದ್ಧಿಗೆ ಪೂರಕವಾದ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದ ಮಾಜಿ, ಅಧ್ಯಕ್ಷ, ಉಪಾಧ್ಯಕ್ಷರುಗಳು, ಎಲ್ಲರನ್ನು ಮತ್ತೊಮ್ಮೆ ಒಂದೇ ಕಡೆ ಕಾಣುವಂತೆ ಮಾಡಿರುವುದಲ್ಲದೆ ನಮ್ಮಿಂದ ಅಭಿವೃದ್ಧಿಗೆ ಪೂರಕವಾದ ಸಲಹೆಗಳನ್ನು ಪಡೆಯುವಂತ ಸಭೆಯನ್ನು ಪ್ರಥಮ ಬಾರಿಗೆ ಆಯೋಜಿಸಿರುವದಕ್ಕೆ ಅಡಳಿತ ಮಂಡಳಿಗೆ ಕೃತಜ್ಷತೆ ಸಲ್ಲಿಸಿದರು. ಮಾಜಿ ಅಧ್ಯಕ್ಷ, ಉಪಾಧ್ಯಕ್ಷರಿಂದ ವಿವಿಧ ಸಲಹೆ, ಸೂಚನೆಗಳನ್ನು ಪಡೆದುಕೊಂಡ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಅಭಿವೃದ್ಧಿಗೆ ಪೂರಕವಾದ ಸಲಹೆ ಸೂಚನೆಗಳನ್ನು ನೀಡಿದ್ದೀರಿ. ಇವುಗಳನ್ನು ಆಧ್ಯತೆಯ ಮೇರೆಗೆ ಎಲ್ಲಾ ಕೆಲಸ ಕಾರ್ಯಗಳನ್ನು ಪೂರೈಸುವುದಾಗಿ ಅವರು ಭರವಸೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಇಂತಹ ವಿನೂತನ ಪ್ರಯತ್ನ ಪುತ್ತೂರಿನಲ್ಲಿ ನಡೆಯಿತು.
ಮಾಜಿ ಅಧ್ಯಕ್ಷರಾದ ಯು. ಲೋಕೇಶ್ ಹೆಗ್ಡೆ, ಸೂತ್ರಬೆಟ್ಟು ಜಗನ್ನಾಥ ರೈ, ಪಿ.ಲತಾ ಗಣೇಶ್ ರಾವ್, ರಾಜೇಶ್ ಬನ್ನೂರು, ಕಮಲಾ ಆನಂದ್, ವಾಣಿ ಶ್ರೀಧರ್, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಮಾಜಿ ಉಪಾಧ್ಯಕ್ಷರಾದ ಎಚ್. ಮಹಮ್ಮದ್ ಆಲಿ,. ವಿಶ್ವನಾಥ ಗೌಡ ಲ್ಯಾನ್ಸಿ ಮಸ್ಕರೇನ, ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರಾದ ಉಷಾ ಯು. ನಾಯಕ್, ಜಯಂತಿ ಬಲ್ನಾಡು, ಉಪಾಧ್ಯಕ್ಷರಾದ ಅಪ್ಪಯ್ಯ ಮಣಿಯಾಣಿ,ಉದಯ ಕುಮಾರ್ ಎಚ್., ವಿನಯ ಭಂಡಾರಿ ಹಾಗೂ ವಿಶ್ವನಾಥ ಗೌಡ ಬನ್ನೂರು ಸಭೆಯಲ್ಲಿ ಭಾಗವಹಿಸಿದ್ದರು. ಪೌರಾಯುಕ್ತೆ ಮಧು ಎಸ್ ಮನೋಹರ್ ಸ್ವಾಗತಿಸಿ, ವಂದಿಸಿದರು.





0 Comments