Ticker

6/recent/ticker-posts

Header Ads Widget

Responsive Advertisement

ಎಸೆಸೆಲ್ಸಿ ಪರೀಕ್ಷೆಗೆ ಸಿದ್ದವಾಗಿದೆ ಸಂತ ಫಿಲೋಮಿನಾ ಪ್ರೌಢ ಶಾಲೆ ಪುತ್ತೂರು | St.Philomena- ಪುತ್ತೂರು ನ್ಯೂಸ್

 


 


ಪುತ್ತೂರು :ರಾಜ್ಯದ್ಯಂತ ಮಾರ್ಚ್ ಅಥವಾ ಎಪ್ರೀಲ್ ತಿಂಗಳಿನಲ್ಲಿ ನಡೆಯಬೇಕಾಗಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕೊರೋನ ಅಡ್ಡಗಾಲು ಹಾಕಿದ್ದು ಪರೀಕ್ಷೆಯನ್ನು ಮುಂದೂಲಾಗಿತ್ತು.
ಇದೀಗ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದಕ್ಕೆ ಶಿಕ್ಷಣ ಇಲಾಖೆ ಮುಹೂರ್ತ ಪಿಕ್ಸ್ ಮಾಡಿದ್ದು ಜುಲೈ 19 ಮತ್ತು 22 ರಂದು ಪರೀಕ್ಷೆ ನಡೆಯಲಿದೆ.
ಈಗಾಗಲೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು ಶಿಕ್ಷಣ ಇಲಾಖೆ ಸೂಚಿಸಿದ ದಿನಾಂಕಗಳಂದೆ ಪರೀಕ್ಷೆ ನಡೆಯಲಿ.
ಪುತ್ತೂರಿನ ಸಂತ ಫಿಲೋಮಿನಾ ಅನುದಾನಿತ ಪ್ರೌಢ ಶಾಲೆ ದರ್ಬೆ ಪುತ್ತೂರು ಇಲ್ಲಿ ಈಗಾಗಲೇ ಪರೀಕ್ಷಾ ಕೊಠಡಿಗಳು ಸಿದ್ದವಾಗಿವೆ.
ಇಲ್ಲಿ ಸರಿ ಸುಮಾರು 360 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 35 ಮೇಲ್ವಿಚಾರಕರು ಇರಲಿದ್ದಾರೆ.

ಈಗಾಗಲೇ ಪರೀಕ್ಷೆಗೆಂದು 30 + 2 ಕೊಠಡಿಗಳು ಸಿದ್ದವಾಗಿವೆ. ಇಲ್ಲಿ 2 ವಿಶೇಷ ಕೊಠಡಿ ಹಾಗೂ ಸ್ಕೌಟ್ ಮತ್ತು ವೈದ್ಯಕೀಯ ಸಿಬ್ಬಂದಿಗಳು ಕೊಠಡಿಗಳು ಮತ್ತು ಕೊಠಡಿ ಮೇಲ್ವಿಚಾರಕರಿಗೆ 1 ಕೊಠಡಿ ವ್ಯವಸ್ಥೆ ಮಾಡಲಾಗಿದೆ‌. 

ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಸರಕಾರದ ಸೂಚನೆಯಂತೆ ಒಂದು ಬೆಂಚ್ ನಲ್ಲಿ ಒಂದು ವಿದ್ಯಾರ್ಥಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಕೊಠಡಿಯೊಳಗೆ ಸ್ಯಾನಿಟೈಜರ್ ಸಿಂಪಡನೆ ಮಾಡಲಾಗಿದ್ದು ಪರೀಕ್ಷೆಗೆ ಬರೆಯುವ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಲಾಗುತ್ತದೆ ಎಂದು ಪ್ರೌಡ ಶಾಲೆಯ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ

 



Post a Comment

0 Comments