ರಾಜ್ಯದಲ್ಲಿ ಇಂದಿನಿಂದ ಕೇರಳಕ್ಕೆ ಬಸ್ ಸಂಚಾರ ನಿರ್ಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ನಾಳೆಯಿಂದ ನಡೆಯಲಿರುವ ಮಂಗಳೂರು ವಿವಿ ಪದವಿ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಇದೀಗ ಗೊಂದಲ ಉಂಟಾಗಿದೆ
ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಯವರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಅವರು ಮಾಹಿತಿ ನೀಡಿದ್ದು, ಜಿಲ್ಲಾಡಳಿತ ವ್ಯಾಪ್ತಿಯಲ್ಲಿ ನಡೆಯುವ ಸಭೆ, ಸಮಾರಂಭ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದ್ದರೂ ಶಾಲಾ ಕಾಲೇಜುಗಳಿಗೆ ಯಾವುದೇ ನಿರ್ಬಂಧ ಇಲ್ಲ.
ಹೊರಗಿನಿಂದ ಬರುವವರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಆಯಾ ಶಾಲಾ ಕಾಲೇಜುಗಳು ಮಾಡುವುದು. ಪರೀಕ್ಷೆ ನಡೆಸುವ ಅಥವಾ ಮುಂದೂಡುವ ಅಧಿಕಾರವನ್ನು ಸಂಬಂಧಪಟ್ಟ ಕಾಲೇಜುಗಳೇ ನಿರ್ಧರಿಸಬೇಕು. ಇದರಲ್ಲಿ ನಮ್ಮ ಪಾತ್ರವಿಲ್ಲ ” ಎಂದು ಹೇಳಿದ್ದಾರೆ.
ಹಾಗಾಗಿ ವಿದ್ಯಾರ್ಥಿಗಳು ಗೊಂದಲಕ್ಕೀಡಾಗದೇ, ಪರೀಕ್ಷೆಗೆ ಸಜ್ಜಾಗುವುದು ಒಳಿತು. ಕೊನೆಗಳಿಗೆಯಲ್ಲಿ ಪರೀಕ್ಷೆ ನಡೆಸುವ ಅಥವಾ ಮುಂದೂಡುವ ನಿರ್ಧಾರ ಮಂಗಳೂರು ವಿವಿ ಆಡಳಿತ ವಿಭಾಗ ನಿರ್ಧರಿಸಲಿದೆ.





0 Comments