ಪುತ್ತೂರು: ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಗದ್ದೆಯಲ್ಲಿ ಅನ್ಯಮತೀಯರು ತಮ್ಮ ವಾಹನ ನಿಲ್ಲಿಸಿ ದೇವಸ್ಥಾನಗಳಿಗೆ ಬರುವ ಭಕ್ತಾದಿಗಳಿಗೆ ಬಹಳ ತೊಂದರೆ ಆಗುತ್ತಿದೆ, ಈ ನಿಟ್ಟಿನಲ್ಲಿ ದೇವರಮಾರು ಗದ್ದೆಯಲ್ಲಿ ಅನ್ಯಮತೀಯರ ವಾಹನ ನಿಲುಗಡೆ ನಿಷೇಧಿಸಬೇಕು ಹಾಗೂ ರಥ ಬೀದಿಗೆ ಪ್ರವೇಶಿಸದಂತೆ ಸೂಕ್ತ ಭದ್ರತೆ ಒದಗಿಸಬೇಕು, ಎಂದು ಹಿಂಜಾವೇ ದೇವಸ್ಥಾನದ ಅಧ್ಯಕ್ಷರಿಗೆ ಮನವಿ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷರಾದ ಅಶೋಕ್ ತ್ಯಾಗರಾಜನಗರ, ತಾಲೂಕ್ ಉಪಾಧ್ಯಕ್ಷರಾದ ಶಶಿಕಾಂತ್ ಕೋರ್ಟ್ ರೋಡ್, ತಾಲೂಕು ಸಂಪರ್ಕ ಪ್ರಮುಖ್ ದಿನೇಶ್ ಪಂಜಿಗ, ತಾಲೂಕು ಮಾತೃ ಸುರಕ್ಷಾ ಪ್ರಮುಖ್ ಸ್ವಸ್ತಿಕ್ ಮೇಗಿನ ಗುತ್ತು, ನಗರ ಕಾರ್ಯದರ್ಶಿ ರಾಜ ಕೋರ್ಟ್ ರೋಡ್, ನಗರ ಸಂಪರ್ಕ ಪ್ರಮುಖ್ ರಾಕೇಶ್ ಓಜಾಲ, ನಗರ ಹಿಂದೂ ಯುವ ವಾಹಿನಿ ಪ್ರಮುಖರಾದ ಮನೀಶ್ ಬನ್ನೂರು ಉಪಸ್ಥಿತರಿದ್ದರು.





0 Comments