ಪುತ್ತೂರು - ಕಡಬ ಉಭಯ ತಾಲೂಕಿನಲ್ಲಿ 13 ಪ್ರಕರಣಗಳು ದೃಢ. ಈ ಪೈಕಿ ಪುತ್ತೂರಿನ ಇಬ್ಬರು,ಕಡಬ ತಾಲೂಕಿನಲ್ಲಿ 11 ಪ್ರಕರಣ ಪತ್ತೆಯಾಗಿವೆ.
ಮಣಿಕ್ಕರ ನಿವಾಸಿ 78 ವರ್ಷ ವಯಸ್ಸಿನ ವೃದ್ಧ, ಉಪ್ಪಿನಂಗಡಿ ಕಾವಲುಗಾರ ಕೆಲಸ ನಿರ್ವಹಿಸುವ 70 ವರ್ಷ ವಯಸ್ಸಿನ ಉತ್ತರ ಪ್ರದೇಶದ ವ್ಯಕ್ತಿಯಲ್ಲಿ ಕೊರೋನಾ ಪ್ರಕರಣ ದೃಢಪಟ್ಟಿದೆ. ಕಾವಲುಗಾರ ವ್ಯಕ್ತಿ ಈಗಾಗಲೇ ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಡಬ ತಾಲೂಕಿನ ಬೆಳಂದೂರು ರೈಲ್ವೇಗೇಟ್ ಬಳಿಯ 65, 43, 28 ವರ್ಷದ ಮಹಿಳೆಯರಿಗೆ, 27, 32 ವರ್ಷದ ಯುವಕರಿಗೆ ಹಾಗೂ 6 ವರ್ಷದ ಬಾಲಕ ಸಹಿತ ಒಂದೇ ಮನೆಯ ಆರು ಮಂದಿಯಲ್ಲಿ ಕೊರೋನಾ ಸೋಂಕು ದೃಢವಾಗಿದೆ. ಬಲ್ಯ ನಿವಾಸಿ 36 ವರ್ಷದ ಮಹಿಳೆ, ಕೋಣಾಜೆ ಕಡ್ಯ 37 ವರ್ಷದ ವ್ಯಕ್ತಿ, ಆಲಂಕಾರು ನಿವಾಸಿ 41 ವರ್ಷದ ವ್ಯಕ್ತಿ, ಚಾರ್ವಕ ನಿವಾಸಿ 41 ವರ್ಷದ ವ್ಯಕ್ತಿ, ಕಡಬ 39 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಕಾಣಿಸಿದೆ.





0 Comments