ಮಹಾಭಾರತ ಯುದ್ಧದಲ್ಲಿ ದ್ರೋಣಾಚಾರ್ಯರಿಂದ ರಚಿಸಲ್ಪಟ್ಟ ಅತ್ಯಂತ ಕಠಿಣವಾದ ವ್ಯೂಹವೆ ಪದ್ಮವ್ಯೂಹ.ಈ ಚಕ್ರವ್ಯೂಹವನ್ನು ಭೇದಿಸಲು ಕೆಲವರಿಗೆ ಮಾತ್ರ ತಿಳಿದಿದ್ದು ಅದರಲ್ಲಿ ಅಭಿಮನ್ಯುನು ಒಬ್ಬ.ಆದರೆ ಅಭಿಮನ್ಯುನು ಇದನ್ನು ಹೇಗೆ ತಿಳಿದುಕೊಂಡ ಗೊತ್ತಾ? ತಾಯಿ ಸುಭದ್ರೆಯು ಅಭಿಮನ್ಯು ಗರ್ಭದಲ್ಲಿರುವಾಗ ಅರ್ಜುನನ ತೊಡೆಯ ಮೇಲೆ ಮಲಗಿ , ಆತ ಹೇಳುತ್ತಿರುವ ಚಕ್ರವ್ಯೂಹ ಬೇಧಿಸುವ ತಂತ್ರವನ್ನು ಕೇಳುತ್ತಿರುತ್ತಾಳೆ.ಆ ಸಮಯದಲ್ಲಿ ಸುಭದ್ರೆಯು ನಿದ್ರೆಗೆ ಜಾರುತ್ತಾಳೆ. ಆದರೆ ಆಕೆಯ ಗರ್ಭದಲ್ಲಿರುವ ಅಭಿಮನ್ಯು ಇವೆಲ್ಲವನ್ನು ಕೇಳುತ್ತಿರುತ್ತಾನೆ.ನಂತರ ಸುಭದ್ರೆಯು ನಿದ್ದೆ ಮಾಡಿದಳೆಂದು ಅರ್ಜುನನು ಚಕ್ರವ್ಯೂಹ ಬೇಧಿಸುವ ತಂತ್ರವನ್ನು ಅರ್ಧದಲ್ಲಿಯೇ ನಿಲ್ಲಿಸಿ ಬಿಡುತ್ತಾನೆ.
ಮಹಾಭಾರತ ಯುದ್ಧದ ಸಮಯದಲ್ಲಿ ಅಭಿಮನ್ಯು ಈ ತಂತ್ರವನ್ನು ಉಪಯೋಗಿಸಿ ವೀರಾವೇಶದಿಂದ ಏಳು ಅಲೆಗಳಂತಹ ವಲಯಗಳಿಂದ ಆವೃತವಾದ ಈ ಚಕ್ರವ್ಯೂಹದ ಒಳಗೆ ನುಗ್ಗುತ್ತಾನೆ.ಹಿಂದಿನಿಂದ ಪಾಂಡವರು ಅಭಿಮನ್ಯುವನ್ನು ರಕ್ಷಿಸುತ್ತ ಬರುತ್ತಿರುತ್ತಾರೆ.ಆದರೆ ಪಾಂಡವರಿಗೆ ಒಳನುಗ್ಗಲು ಸಾಧ್ಯವಾಗುದಿಲ್ಲ.ಇದಕ್ಕೆ ಕಾರಣ ಏನೆಂದರೆ ಪಾಂಡವರನ್ನು ಯಾವಾಗಲಾದರೂ ತಡೆಹಿಡಿಯುವ ವರವನ್ನು ಹೊಂದಿದ್ದ ಜಯದ್ರಥನು ಇವರನ್ನು ಯುದ್ದರಂಗದಲ್ಲಿ ತಡೆಹಿಡಿಯುತ್ತಾನೆ.ಇದರಿಂದಾಗಿ ಅಭಿಮನ್ಯುನು ಒಬ್ಬನೇ ವ್ಯೂಹದೊಳಗೆ ನುಗ್ಗಿ ವೀರವೇಶವಾಗಿ ಹೊರಡುತ್ತಾನೆ.ಆದರೆ ವ್ಯೂಹದೊಳಗೆ ನುಗ್ಗುವ ತಂತ್ರಜ್ಞಾನ ಮಾತ್ರ ತಿಳಿದಿದ್ದ ಅಭಿಮನ್ಯು ಹೊರ ಬಾರಲಾರದೆ ವೀರಮರಣ ಹೊಂದುತ್ತಾನೆ.






0 Comments