Ticker

6/recent/ticker-posts

Header Ads Widget

Responsive Advertisement

ಧರ್ಮಸ್ಥಳ ದಲ್ಲಿ ಡ್ರೋನ್ ಬಳಸಿ ಸ್ಯಾನಿಟೈಸರ್ ಸಿಂಪಡಣೆ ಆರಂಭ

 


 


ಧರ್ಮಸ್ಥಳ: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಒಂದು ಸಾವಿರ ಯುವಕರ ತಂಡ ಒಂದು ಸಾವಿರ ಗ್ರಾಮಗಳಲ್ಲಿ ಅತ್ಯಾಧುನಿಕ ಮಟ್ಟದ ಡ್ರೋನ್ ಮೂಲಕ ಸಾವಯವ ಸ್ಯಾನಿಟೈಸರ್ ಸಿಂಪಡಿಸುವ ಕಾರ್ಯಕ್ಕೆ ಇಳಿದಿದ್ದು ಇದೊಂದು ಮಾದರಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಇಂದು ಶ್ರೀಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ| ಎ.ಪಿ.ಜೆ ಅಬ್ದುಲ್ ಕಲಾಂ ಅವರ ಶಿಷ್ಯರಾದ ಡಾ| ಕಾರ್ತಿಕ್ ನಾರಾಯಣ್ ಮತ್ತು ಚೆನೈನ ಅಣ್ಣಾ ವಿಶ್ವವಿದ್ಯಾಲಯದ ನಿರ್ದೇಶಕ ಡಾ| ಸೆಂಥಿಲ್ ಕುಮಾರ್ ನೇತೃತ್ವದ ಸುಧಾರಾಧನಾ ತಂಡ ಮತ್ತು ಎಸ್‍ಪಿ ರವಿ ಚೆನ್ನಣ್‍ರವರ ಮಾರ್ಗದರ್ಶನದಲ್ಲಿ ಕೊರೊನಾ ಸೋಂಕು ತಡೆಗೆ ಡ್ರೋನ್ ಮೂಲಕ ಸಾವಯವ ಸ್ಯಾನಿಟೈಸರ್ ಸಿಂಪಡನೆಗೆ ಚಾಲನೆ ನೀಡಿದರು.16 ಲೀಟರ್ ದ್ರವ ತುಂಬಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದು ನಿರಂತರ ಐದು ಘಂಟೆಗಳ ಕಾಲ ಬಳಸಬಹುದು. ಚೆನೈನ ಅಣ್ಣಾ ವಿಶ್ವವಿದ್ಯಾಲಯದ ಎಂ.ಐ.ಟಿ.ಯಲ್ಲಿ ನಿರ್ಮಿಸಲಾದ ಬ್ಯಾಟರಿ ಚಾಲಿತ ಡ್ರೋನ್ ಇದರಲ್ಲಿದ್ದು ಯಾವುದೇ ಕಟ್ಟಡದ ಹೊರಾವರಣವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಬಹುದು ಎಂದು ಹೇಳಿದರು.

 



Post a Comment

0 Comments