ಸುಳ್ಯದ ಆಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ಮನೆಯ ಸಮೀಪದ ಇದ್ದ ಧರೆ ಕುಸಿದು ಬಿದ್ದು ಮನೆಗೆ ಹಾನಿಯಾದ ಘಟನೆ ನಡೆದಿದೆ. ಮೊರಂಗಲ್ಲು ಶಿವರಾಮ ರೈಯವರ ಮನೆ ಹಿಂಬದಿಯ ಧರೆ ಭಾರೀ ಪ್ರಮಾಣದಲ್ಲಿ ನಿನ್ನೆ ರಾತ್ರಿ ಕುಸಿದು ಘಟನೆ ಸಂಭಿವಿಸಿದೆ. ಶಿವರಾಮ ರೈ ದಂಪತಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ಶೆಡ್ ನಲ್ಲಿ ನಿಲ್ಲಿಸಿದ್ದ ಕಾರಿಗೆ ಸ್ವಲ್ಪ ಹಾನಿಯಾಗಿದೆ ಎಂದು ತಿಳಿದುಬಂದಿದೆ.





0 Comments