Ticker

6/recent/ticker-posts

Header Ads Widget

Responsive Advertisement

ಕಂಗಾನ ರನೋತ್ ಗೆ ಮುಂಬೈ ಪೋಲಿಸರಿಂದ ಭದ್ರತೆ.?

 


 


ಮುಂಬೈ: ಇಲ್ಲಿನ ಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ಬಾಲಿವುಡ್‌ ನಟಿ ಕಂಗನಾ ರನೋತ್‌ ಅವರ ಬಂಗಲೆ ಮತ್ತು ಕಚೇರಿಗೆ ಮುಂಬೈ ಪೊಲೀಸ್‌ ಭದ್ರತೆ ವ್ಯವಸ್ಥೆ ಮಾಡಿದ್ದಾರೆ. ಸಬರ್ಬನ್‌ ಖಾರ್‌ ಪ್ರದೇಶದಲ್ಲಿರುವ ಅವರ ನಿವಾಸಕ್ಕೂ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.

ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ(ಪಿಒಕೆ) ಹೋಲಿಸಿದ್ದ ಕಂಗನಾ, 'ಸಿನಿಮಾ ಮಾಫಿಯಾಗಿಂತ ನಾನು ಮುಂಬೈ ಪೊಲೀಸರನ್ನು ಕಂಡರೆ ಹೆದರುತ್ತೇನೆ ಎಂದು ಟ್ವೀಟ್‌ ಮಾಡಿದ್ದರು. ಇದು ಭಾರಿ ವಿವಾದವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕಂಗನಾ ರನೋತ್‌ಗೆ ವೈ-ಪ್ಲಸ್‌ ಶ್ರೇಣಿಯ ಭದ್ರತೆಯನ್ನು ಕೂಡ ನೀಡಲಾಗಿದೆ.

ಕಂಗನಾ ರನೋತ್‌ ಅವರ ಬಾಂದ್ರಾದಲ್ಲಿರುವ ಬಂಗಲೆಯ ಅನಧಿಕೃತ ಎಂದು ಹೇಳಲಾದ ಭಾಗವನ್ನು ಬೃಹನ್‌ ಮುಂಬೈ ಮಹಾನಗರ ಪಾಲಿಕೆಯು ಬುಧವಾರ ನೆಲಸಮಗೊಳಿಸಿದೆ. ಕಂಗನಾ ರನೋತ್‌ ಅವರು ಹಿಮಾಚಲ ಪ್ರದೇಶದಿಂದ ಬುಧವಾರ ಮುಂಬೈಗೆ ವಾಪಸಾಗಿದ್ದಾರೆ.

 



Post a Comment

0 Comments