Ticker

6/recent/ticker-posts

Header Ads Widget

Responsive Advertisement

ಆಟೋ ರಿಕ್ಷಾ,ಕ್ಯಾಬ್ ಚಾಲಕರ 3 ಸಾವಿರ ಪಡೆಯುವುದು ಹೇಗೆ ಇಲ್ಲಿದೆ ಪೂರ್ತಿ ಮಾಹಿತಿ

 


 


ಹಂತ 1: ಸೇವಾಸಿಂಧು ಪೋರ್ಟಲ್ ಲಾಗ್​ ಇನ್ಆಗಬೇಕು.

ಹಂತ 2: ಮುಖಪುಟ ಎಂಬುದರ ಆಯ್ಕೆ ಮೇಲೆ ಕ್ಲಿಕ್ ಮಾಡಿದಲ್ಲಿ, ಮೇಲ್ಭಾಗದಲ್ಲಿ ಇರುವಂಥ ಕೋವಿಡ್-19 ಎರಡನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ಆಟೋರಿಕ್ಷಾ ಚಾಲಕರು , ಟ್ಯಾಕ್ಸಿ ಚಾಲಕರು ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಪರಿಹಾರ ವಿತರಣೆ ಎಂಬ ಆಯ್ಕೆ ಕಾಣುತ್ತದೆ. ಅದನ್ನು ಆಯ್ಕೆ ಮಾಡಬೇಕು.

ಹಂತ 3: ಅರ್ಜಿದಾರರ ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ವಿಳಾಸ, ಡಿ.ಎಲ್​. ಹಾಗೂ ಅದರ ವ್ಯಾಲಿಡಿಟಿ, ಬ್ಯಾಡ್ಜ್​ ಸಂಖ್ಯೆ, ಲಾಕ್​ಡೌನ್​ಗಿಂತ ಮುಂಚೆ ಚಲಾಯಿಸುತ್ತಿದ್ದ ವಾಹನಕ್ಕೆ ಸಂಬಂಧಿಸಿದ ದಾಖಲೆ, ಬ್ಯಾಂಕ್ ವಿವರಗಳು ಹೀಗೆ ಕಡ್ಡಾಯವಾಗಿ ಭರ್ತಿ ಮಾಡಬೇಕಾದ ಮಾಹಿತಿಯನ್ನು ಕೆಂಪು ನಕ್ಷತ್ರ ಚಿಹ್ನೆಯಲ್ಲಿ ತೋರಿಸಲಾಗಿದೆ. ಅವನ್ನೆಲ್ಲ ಭರ್ತಿ ಮಾಡಬೇಕು.

ಹಂತ 4: ಘೋಷಣೆ ಇರುವಂಥ ಸ್ಥಳದಲ್ಲಿ ಚೌಕಾಕಾರದ ಗುರತುಗಳಿದ್ದು, ಅದನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಕ್ಲಿಕ್ ಮಾಡಬೇಕು.

ಹಂತ 5: ದೃಢೀಕರಣಕ್ಕಾಗಿ ಆರಂಕಿಯ ಸಂಖ್ಯೆಗಳಿರುತ್ತವೆ. ಅದನ್ನು ಟೈಪ್​ ಮಾಡಿ, ದೃಢೀಕರಿಸಿದ ನಂತರ Submit ಎಂಬುದರ ಮೇಲೆ ಕ್ಲಿಕ್ ಮಾಡಬೇಕು.

ಅಂದ ಹಾಗೆ, ಕೋವಿಡ್ ಪ್ಯಾಕೇಜ್ ಪರಿಹಾರ ಧನವು ಚಾಲನೆ ಪರವಾನಗಿ ಪ್ರಮಾಣಪತ್ರ ಹೊಂದಿರುವ ಹಾಗೂ ಅಗತ್ಯವಿರುವ ಚಾಲಕರ ಬ್ಯಾಂಕ್ ಖಾತೆಗೆ DBT (ನೇರ ಅನುಕೂಲ ವರ್ಗಾವಣೆ) ಮೂಲಕವೇ ಸಂದಾಯ ಆಗುತ್ತದೆ. ಕೆಲವು ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಮಾಲೀಕರು ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಹೊಂದಿದ್ದು, ಅವರಿಗೆ ಪರಿಹಾರ ಧನ ಸಂದಾಯವಾದಲ್ಲಿ ಜೀವನ ನಿರ್ವಹಣೆಯನ್ನು ಎದುರಿಸುತ್ತಿರುವ ಚಾಲಕರಿಗೆ ಸಿಗದಂತಾಗುತ್ತದೆ. ಆದ್ದರಿಂದ ನಕಲು ಅಥವಾ ದುಪ್ಪಟ್ಟು ಪಾವತಿ ಆಗದಂತೆ ಅವರ ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆಗೆ ಮಾತ್ರ ಲಿಂಕ್ ಆಗಿರುವ ಬಗ್ಗೆ ಗಮನಹರಿಸಿ, ವರ್ಗಾಯಿಸಬೇಕು.

ಈ ಪ್ಯಾಕೇಜ್ ಪರಿಹಾರವನ್ನು ಪಡೆದುಕೊಳ್ಳುವುದಕ್ಕೆ ಯಾವುದೇ ಮಧ್ಯವರ್ತಿಗಳ ಅಗತ್ಯ ಇಲ್ಲ. ನೇರವಾಗಿ ಆನ್​ಲೈನ್​ನಲ್ಲಿ ಅರ್ಜಿ ಹಾಕಬಹುದು. Mozilla Firefox ಅಥವಾ Google Chrome ಬ್ರೌಸರ್ ಬಳಸಿ, ಅರ್ಜಿ ಸಲ್ಲಿಸುವುದು ಉತ್ತಮ. 

 



Post a Comment

0 Comments