ಮಳೆಗಾಲದಲ್ಲಿ ಕಪ್ಪೆ ವಟಾವಟಾ ಮಾಡಿದಂತೆ ಕಾಂಗ್ರೆಸ್ನ ಟೂಲ್ ಕಿಟ್ ಪ್ರಯೋಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವುದಿಲ್ಲ ಎಂದು ಆರ್.ಸಿ ನಾರಾಯಣ್ ಹೇಳಿದರು. ಕಳೆದ ಮೂರು ವರ್ಷಗಳ ಹಿಂದೆ ಚುನಾವಣೆಯಲ್ಲಿ ಜನರು ಸಂಜೀವ ಮಠಂದೂರು ಅವರನ್ನು ಶಾಸಕರನ್ನಾಗಿ ಮಾಡಿರುವುದನ್ನು ನೋಡಿ ಯಾರು ನಾಲಾಯಕ್, ಯಾರು ಲಾಯಕ್ ಎಂದು ತಿಳಿದುಕೊಂಡು ಮಾತನಾಡುವಂತೆ ದ.ಕ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್.ಸಿ.ನಾರಾಯಣ್ ಅವರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಿಗೆ ಸವಾಲು ಹಾಕಿದ್ದಾರೆ. ಈ ಮೂಲಕ ಜನರು ಸಂಜೀವ ಮಠಂದೂರು ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಪುತ್ತೂರು ಬಿಜೆಪಿ ಕಚೇರಿಯಲ್ಲಿ ಅವರು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ ಅನ್ಯ ಕಾರ್ಯದ ನಿಮಿತ್ತ ಶಾಸಕರು ಇಂದಿರಾ ಕ್ಯಾಂಟೀನ್ ಭೇಟಿ ನೀಡಿದ ವೇಳೆ ಅಲ್ಲಿ ಒಂದಷ್ಟು ದಾಖಲೆ ಪರಿಶೀಲಿಸಿದಾಗ ಲೋಪ ಕಂಡುಬಂದಲ್ಲಿ ಅದನ್ನು ಸರಿಪಡಿಸಬೇಕೆಂದು ಹೇಳಿದ್ದಾರೆ ಹೊರತು ಯಾವುದೇ ಬಡವರಿಗೆ ಅಲ್ಲಿರುವ ವ್ಯವಸ್ಥೆಗಳಿಂದ ತೊಂದರೆ ಆಗಬೇಕೆಂದು ಹೇಳಿಲ್ಲ. ಲೋಪವನ್ನು ಸರಿಪಡಿಸುವ ಸೂಚನೆಯನ್ನು ಶಾಸಕರು ನೀಡಿರುವುದನ್ನು ವೈಭವಿಕರಿಸುವ ಕೆಲಸವನ್ನು ಕಾಂಗ್ರೆಸ್ನ ಶಕುಂತಳಾ ಶೆಟ್ಟಿ ಅವರು ಮಾಡುವ ಮೂಲಕ ಕೀಳು ಮಟ್ಟದ ಹೇಳಿಕೆಯನ್ನು ನೀಡಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಅವರು ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನು ನಾಲಾಯಕ್ ಎಂದು ಹೇಳಿರುವುದು ಖಂಡನೀಯ. ಕಳೆದ ಮೂರು ವರ್ಷಗಳ ಹಿಂದೆ ಚುನಾವಣೆ ನಡೆದಾಗ ಜನರು ಶಕುಂತಳಾ ಶೆಟ್ಟಿಯವರನ್ನು ತಿರಸ್ಕಾರ ಮಾಡಿ ಸಂಜೀವ ಮಠಂದೂರು ಅವರನ್ನು ಶಾಸಕರನ್ನಾಗಿ ಮಾಡಿದಾಗ ಯಾರು ನಾಲಾಯಕ್ ಯಾರು ಲಾಯಕ್ ಎಂದು ತಿಳಿದು ಕೊಳ್ಳಬೇಕಾಗಿತ್ತು. ಪುತ್ತೂರಿನ ಪ್ರಜ್ಞಾವಂತ ಮತದಾದರು ನಿಶ್ಚಿತವಾಗಿ ಬಿಜೆಪಿ ಶಾಸಕರ ಹಿಂದೆ ನಿಂತಿರುವುದಲ್ಲದೆ ಆಗಿರುವ ಕೆಲಸವನ್ನು ಗಟ್ಟಿತನ ಮಾಡುವಲ್ಲಿ ಬಿಜೆಪಿ ಕಾರ್ಯಕರ್ತರ ಆಶಯಗಳಿಗೆ ಸ್ಪಂಧಿಸುವ ಕೆಲಸವನ್ನು ಪುತ್ತೂರಿನ ಜನತೆ ಮಾಡಿದೆ. ಆದರೆ ಕಾಂಗ್ರೆಸ್ನಲ್ಲಿ ಟೂಲ್ ಕಿಟ್ ಸಂಸ್ಕೃತಿ ಬೆಳೆಯುತ್ತಿದೆ. ಯಾವುದೋ ಸಣ್ಣ ಆರೋಪವನ್ನು ದೊಡ್ಡ ಮಾಡುವ ಮೂಲಕ ರಾಜ್ಯ, ರಾಷ್ಟ್ರದಲ್ಲಿ ಟೂಲ್ ಕಿಟ್ ಪ್ರಯೋಗ ಮಾಡಲಾಗುತ್ತಿದೆ. ಪುತ್ತೂರಿನಲ್ಲಿ ಅವರಿಗೆ ಸಣ್ಣ ಟೂಲ್ ಕಿಟ್ ಸಿಕ್ಕಿದೆ. ಇಲ್ಲಿ ಲೋಪ ಇಲ್ಲದಿದ್ದರೂ ಅದನ್ನು ಲೋಪವೆಂದು ಬಿಂಬಿಸುವ ಕೆಲಸ ಆಗುತ್ತಿದೆ. ಆದರೆ ಇದರಿಂದ ಬಿಜೆಪಿ ಜನಪ್ರಿಯತೆಯನ್ನು ಕುಗ್ಗಿಸಲು ಅವರಿಂದ ಸಾಧ್ಯವಿಲ್ಲ ಎಂದು ಹೇಳಿದ ಆರ್.ಸಿ ನಾರಾಯಣ್ ಅವರು ಪುತ್ತೂರಿನಲ್ಲಿ ಯಾವ ಟೂಲ್ ಕಿಟ್ ಪ್ರಯೋಗ ನಡೆಯಲು ಬಿಡುವುದಿಲ್ಲ, ನಿಮ್ಮ ಟೂಲ್ ಕಿಟ್ ಸ್ಪೇನರ್ ಅನ್ನು ನಿಮ್ಮ ಚೀಲದಲ್ಲಿ ತುಂಬಿಸಿಕೊಂಡು ಹೋಗಬಹುದು ಎಂದು ಎಚ್ಚರಿಕೆ ನೀಡಿದರು. ಈ ಮಾತನ್ನು ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಆರ್.ಸಿ ನಾರಾಯಣ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.





0 Comments