ರಾಜ್ಯದಲ್ಲಿ ಪಿಯುಸಿ ಪರೀಕ್ಷೆ ಬೇಡ ಎನ್ನುತಿರುವ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡಾ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ. ಸ್ವತಃ ಶಿಕ್ಷಣ ತಜ್ಞರೂ ಆಗಿರುವ ಬಸವರಾಜ್ ಹೊರಟ್ಟಿ (basavaraj horatti) ಅವರು ಪರೀಕ್ಷೆಗಳ ಬಗ್ಗೆ ಸಲಹೆ ನೀಡಲು ಮುಂದಾಗಿದ್ದಾರೆ. ಗಮನಾರ್ಹವೆಂದ್ರೆ ದ್ವಿತೀಯ ಪಿಯುಸಿ ಪರೀಕ್ಷೆ ಬೇಡಾ ಅನ್ನೊ ವಾದವನ್ನು ಸಭಾಪತಿ ಹೊರಟ್ಟಿ ಮುಂದಿಟ್ಟಿದ್ದಾರೆ. ಪಿಯು ಎಕ್ಸಾಂ ನಡೆಸದೇ ಹೋದ್ರೆ ಸಮಸ್ಯೆಯೇನೂ ಇಲ್ಲ. ನೀಟ್ ಸಿಇಟಿ ಪರೀಕ್ಷೆಗಳಿಗೆ ಪಿಯು ಅಂಕಗಳನ್ನ ಈಗ ಪರಿಗಣಿಸುತ್ತಿಲ್ಲ. ಕೇವಲ ಸಿಇಟಿ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ವೃತ್ತಿಪರ ಕೋರ್ಸ್ ಗೆ ಸೀಟ್ ಹಂಚಿಕೆ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಪಿಯು ಪರೀಕ್ಷೆ ಅವಶ್ಯ ಇಲ್ಲ ಅಂತಿದ್ದಾರೆ ಬಸವರಾಜ್ ಹೊರಟ್ಟಿ. ಆದ್ರೆ ಎಸ್ಎಸ್ಎಲ್ಸಿ ಎಕ್ಸಾಂ ನಡೆಸಿ ಎಂಬ ಸಲಹೆ ಸಭಾಪತಿ ಹೊರಟ್ಟಿ ಅವರದ್ದಾಗಿದೆ. ಈ ಮೂಲಕ ಇಡೀ ರಾಜ್ಯದಲ್ಲಿ ಇದೇನಪ್ಪಾ ಎನ್ನುವ ರೀತಿ ಆಗಿದೆ.
0 Comments