ಭಾರತದ ಮೇಲೆ ಕಾಳಜಿ ವ್ಯಕ್ತಪಡಿಸಿ, ದೇಶದ ಹೊಸ ಐಟಿ ಕಾನೂನುಗಳಿಂದ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಕುತ್ತು ಉಂಟಾಗುವ ಸಾಧ್ಯತೆ ಇದೆ ಎಂದು ಟ್ವಿಟ್ಟರ್ ಹೇಳಿಕೆ ನೀಡಿತ್ತು ಇದರ ಮೇಲೆ ಕೇಂದ್ರ ಗರಂ ಆಗಿದೆ. ಇದೀಗ ಆ ಹೇಳಿಕೆಗೆ ಕೇಂದ್ರ ಸರಕಾರ ಖಾರದ, ಮುಟ್ಟಿ ನೋಡಿಕೊಳ್ಳಬೇಕು ಅಂತಹ ಉತ್ತರನೀಡಿದೆ.
ಟ್ವಿಟರ್ ಇಂಡಿಯಾದ ದೆಹಲಿ ಮತ್ತು ಗುರ್ಗಾವ್ನ ಕಛೇರಿಗಳಿಗೆ ಸೋಮವಾರ ದೆಹಲಿ ಪೊಲೀಸ್ ರು ಭೇಟಿ ನೀಡಿದ್ದರು ಮತ್ತು ಅವರು ತನಿಖೆಯಲ್ಲಿ ಪಾಲ್ಗೊಳ್ಳಲು ನೋಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ಟ್ವಿಟರ್ ಈ ಹೇಳಿಕೆ ನೀಡಿತ್ತು.
ಈ ಬಗ್ಗೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ, ವಾಕ್ಸ್ವಾತಂತ್ರ್ಯಕ್ಕೆ ಶತಮಾನಗಳಿಂದಲೂ ಮನ್ನಣೆ ಕೊಡುತ್ತಾ ಬಂದಿರುವ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಇದಕ್ಕೆ ಟ್ವಿಟರ್ ತನ್ನ ನಿಯಮಗಳನ್ನು ನಿರ್ದೇಶಿಸುವ ಪ್ರಯತ್ನ ಮಾಡುತ್ತಿದೆ. “ವಾಕ್ಸ್ವಾತಂತ್ರ್ಯ ಒಂದು ವಿದೇಶೀ ಲಾಭಾಕಾಂಕ್ಷಿ ಕಂಪೆನಿಯಾದ ಟ್ವಿಟರ್ನ ಸ್ವತ್ತಲ್ಲ. ಅದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಮತ್ತು ಅದರ ಸಂಸ್ಥೆಗಳ ( ಭಾರತದ) ಬದ್ಧತೆಯಾಗಿದೆ” ಎಂದು ಹೇಳಿದೆ. “ತನ್ನ ತಪ್ಪುಗಳನ್ನು ಮುಚ್ಚಿಟ್ಟುಕೊಂಡು, ವಿನಾಕಾರಣ ಭಾರತಕ್ಕೆ ಕೆಟ್ಟ ಹೆಸರು ತರುವಂತಹ ಆಧಾರವಿಲ್ಲದ ಹೇಳಿಕೆಯನ್ನು ಟ್ವಿಟರ್ ನೀಡಿರುವುದು ಖಂಡನೀಯ” ಎಂದು ಬಿಸಿ ಮುಟ್ಟಿಸಿದೆ.






0 Comments