ನವದೆಹಲಿ: ಒಂದು ಕಡೆ ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಲಸಿಕೆ ಹಾಕಿಸಿಕೊಂಡರೆ ಸಾಕು ಎಂಬ ಜನಜನಿತ ನಂಬಿಕೆ ದೃಢವಾಗುತ್ತಿರುವಾಗಲೇ ಕೇಂದ್ರ ಸರ್ಕಾರದಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಅಮೆರಿಕದಲ್ಲಿ ಎಲ್ಲರೂ ಎರಡು ಬಾರಿ ಲಸಿಕೆ ಹಾಕಿಸಿಕೊಂಡು ನಮಗಿನ್ನು ಕೊರೊನಾ ಬರಾಕಿಲ್ಲ ಎಂದು ಮೂತಿಗೆ ಹಾಕಿಕೊಂಡಿದ್ದ ಮಾಸ್ಕ್ ಅನ್ನು ಕಿತ್ತೆಸೆದು, ಎದುರಿಗೆ ಬಂದವರನ್ನೆಲ್ಲ ಅಪ್ಪಿಕೊಳ್ಳುತ್ತಿದ್ದಾರೆ. ನೋಡಿ ನಾವು ಕೊರೊನಾದಿಂದ ಮುಕ್ತ ಮುಕ್ತ ಎಂದು ಸಾರುತ್ತಿದ್ದಾರೆ. ಆದರೆ ಈ ಮಧ್ಯೆ, ಕೇಂದ್ರ ಸರ್ಕಾರ ನಿರ್ದೇಶಿತ ಅಧ್ಯಯನ ಪ್ರಕಾರ ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಹಾಕಿಸಿಕೊಂಡರೆ ಅದೂ ಎರಡು ಬಾರಿ ಹಾಕಿಸಿಕೊಂಡರೂ ಕೊರೊನಾ ಬರುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಲು ಸಾಧ್ಯವಿಲ್ಲ. ಹಾಗಾಗಿ ಎರಡು ಬಾರಿ ಲಸಿಕೆ ಹಾಕಿಸಿಕೊಳ್ಳುವುದರ ಜೊತೆಗೆ ಅದಕ್ಕೆ ಪೂರಕವಾಗಿ ಬೂಸ್ಟರ್ ಲಸಿಕೆಯನ್ನೂ ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿದುಬಂದಿದೆ
0 Comments