ಹಿಂಜಾವೇ ಪುತ್ತೂರು ರಾಜ್ಯಕ್ಕೆ ಮಾದರಿ
ರಾಷ್ಟ್ರ ಕಾಯಕದಲ್ಲಿ ತೊಡಗಿಕೊಂಡಿರುವ ಪುತ್ತೂರು ಹಿಂಜಾವೇ ರಕ್ತ ದಾನದಲ್ಲಿ ಸೈ ಎನಿಸಿಕೊಂಡಿರುವ ಸಂಘಟನೆ.
ಕೋರೋನ ಸೋಂಕಿನಿಂದ ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯದಲ್ಲಿ ಸದ್ಯ ಲಾಕ್ ಡೌನ್ ಜಾರಿಯಲ್ಲಿದೆ ಈ ಕಷ್ಟಕಾಲದಲ್ಲಿ ಅನೇಕ ಬಡಜನರಿಗೆ ತೆರೆಮರೆಯಲ್ಲಿ ಸಹಾಯ ಮಾಡುತ್ತಿದೆ.
ಸೇವಾ ಭಾರತಿ ಪುತ್ತೂರು ಇದರ ಜೊತೆಗೂಡಿ ದಿನ ಒಂದಕ್ಕೆ ಸುಮಾರು 14-20 ಯೂನಿಟ್ ರಕ್ತ ಪ್ರತಿ ದಿನ ಬ್ಲಾಡ್ ಬ್ಯಾಂಕ್ ಪುತ್ತೂರು ಮೂಲಕ ಹಿಂಜಾವೇ ಕಾರ್ಯಕರ್ತರು ವ್ಯವಸ್ಥೆ ಮಾಡುತ್ತಿದ್ದಾರೆ. ಇದರೊಂದಿಗೆ ಹಿಂಜಾವೇ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆ ಹಾಗೂ ಕೋರೋನ ಸೋಂಕಿನಿಂದ ಮೃತಪಟ್ಟ ಸೋಂಕಿತರ ಅಂತ್ಯ ಕ್ರಿಯೆ ಕೂಡ ನಡೆಸುತ್ತಿದ್ದಾರೆ. ಎಲ್ಲಾ ಸಮಯದಲ್ಲೂ ಸಮಾಜಮುಖಿ ಕೆಲಸ ಮಾಡುತ್ತಿದೆ ಹಿಂಜಾವೇ ಪುತ್ತೂರು.





0 Comments