ಮಂಗಳೂರು: ಕುವೈಟ್ ಮತ್ತು ಯುಎಇ ರಾಷ್ಟ್ರಗಳಿಂದ 272.820 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತ ಹಡಗು ನವಮಂಗಳೂರು ಬಂದರಿಗೆ ಇಂದು ಬಂದಿದೆ.ನೌಕಾಪಡೆಯ ಹಡಗು ಐಎನ್‌ಎಸ್ ‘ಶಾರ್ದೂಲ್’ ನವಮಂಗಳೂರು ಬಂದರಿಗೆ 11 ಕಂಟೈನರ್ ಗಳಲ್ಲಿ (ಇದರಲ್ಲಿ 3 ಟ್ರೈಲರ್ ಮೌಂಟೆಡ್ ಕಂಟೈನೆರ್) ದ್ರವೀಕೃತ ಆಮ್ಲಜನಕ ಮತ್ತು 60 ಪ್ಯಾಲೇಟ್ ಗಳಲ್ಲಿ ಆಮ್ಲಜನಕ ಸಿಲಿಂಡರ್ ಗಳನ್ನು (ಒಟ್ಟು 272.820 ಮೆಟ್ರಿಕ್ ಟನ್) ಹೊತ್ತು ಬಂದಿದೆ. ಈ ಮೂಲಕ ಹಲವು ರಾಷ್ಟ್ರಗಳು ಭಾರತದ ನೆರವಿಗೆ ನಿಂತಿದೆ.ಹಾಗೂ ಭಾರತಕ್ಕೆ ಆಮ್ಲಜನಕ ಪೂರೈಕೆ ಮಾಡುತ್ತಿದೆ.





0 Comments