ನಾಳೆಯಿಂದ ಕಿರುತೆರೆಯಲ್ಲಿ ಬರಲಿದೆ 'ಸ್ವಾತಂತ್ರ್ಯ ವೀರ ' 'ಸುಭಾಷ್ ಚಂದ್ರ ಬೋಸ್' ಅವರ ಜೀವನಾಧಾರಿತ ಧಾರಾವಾಹಿ
ಸ್ವಾತಂತ್ರ್ಯ ಸೇನಾನಿಗಳು ನಮ್ಮ ದೇಶ ಸ್ವತಂತ್ರ ದೇಶ ಆಗುವಲ್ಲಿ ಪ್ರಮುಖ ಪಾತ್ರಧಾರಿಗಳು.ಅವರಲ್ಲಿ ಹಿಂಸೆಗೆ ಹಿಂಸೆಯೇ ಮಾರ್ಗ ಎಂಬುದನ್ನು ಮನಗಂಡು ಆಜಾದ್ ಹಿಂದ್ ಸೇನೆ ಕಟ್ಟಿ ಬ್ರಿಟಿಷರ ವಿರುದ್ದ ಹೋರಾಡಿದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಜೀವನ ಆಧಾರಿತ ಧಾರವಾಹಿ ನಾಳೆಯಿಂದ ಕಿರುತೆರೆಯಲ್ಲಿ ಬರಲಿದೆ.
ಇವರ ಪರಿಚಯವನ್ನು ತಿಳಿಸುವುದು ಇಂದಿನ ಯುವ ಪೀಳಿಗೆಗೆ ಅತ್ಯಗತ್ಯ ಎಂಬಂತಾಗಿದೆ.ಇದನ್ನು ಗಮನದಲ್ಲಿಟ್ಟುಕೊಂಡು ಇದೀಗ ಕನ್ನಡ ಕಿರುತೆರೆಯಲ್ಲಿ ಭಾರತದ ಸ್ವಾತಂತ್ರ ಹೋರಾಟಗಾರರಲ್ಲಿ ಉತ್ತುಂಗ ಸ್ಥಾನದಲ್ಲಿದ್ದ ಸುಭಾಷ್ ಚಂದ್ರ ಬೋಸ್ ಅವರ ಜೀವನಚರಿತ್ರೆ ಧಾರಾವಾಹಿ ರೂಪದಲ್ಲಿ ಪ್ರಸಾರವಾಗಲಿದೆ. ಇತ್ತೀಚೆಗಷ್ಟೇ ಜಿ ಕನ್ನಡದಲ್ಲಿ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ “ಮಹಾನ್ ನಾಯಕ” ಜನಪ್ರಿಯತೆ ಪಡೆದುಕೊಂಡಿತ್ತು. ಇದೀಗ ಮತ್ತೊಂದು ಹೊಸ ದಾಖಲೆ ಬರೆಯಲು ಜೀ ಕನ್ನಡ ಮುಂದಾಗಿದ್ದು, ಮತ್ತೊರ್ವ ಮೇರು ಪರ್ವದ ಹೋರಾಟಗಾರನ ಜೀವನವನ್ನು ಜನರಿಗೆ ಪರಿಚಯಿಸಲು ಮುಂದಾಗಿದೆ. ಈ ಹೊಸ ಧಾರಾವಾಹಿಯು ಜೂ.7ರಿಂದ ಪ್ರತಿದಿನ(ಸೋಮವಾರ ದಿಂದ ಶುಕ್ರವಾರ) ಸಂಜೆ 5ರಿ0ದ 6 ರವರೆಗೆ ಪ್ರಸಾರ ಆಗಲಿದೆ.





0 Comments